ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡುವಂತೆ ಎಲ್ಲಾ ಸಚಿವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯನ್ನುಕೊಟ್ಟಿದ್ದಾರೆ ಎನ್ನಲಾಗಿದೆ.
ಇಂದು ಎರಡನೇ ದಿನದ ಅಧಿವೇಶನ ನಡೆಯಲಿದ್ದು ಸದನದಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರು ಚರ್ಚೆ ಮಾಡುತ್ತಿರುವಾಗ ತಪ್ಪಿಗೆ ಸಿಕ್ಕಿಕೊಳ್ಳದ ರೀತಿ ಉತ್ತರ ಕೊಡಿ. ತಮ್ಮ ಮಾತಿನ ಮೂಲಕ ಸಿದ್ದರಾಮಯ್ಯ ನಮ್ಮನ್ನು ಸಿಕ್ಕಿಸಬೇಕು ಅಂತಾನೇ ಪ್ರಯತ್ನ ಪಡುತ್ತಿರುತ್ತಾರೆ. ನೀವು ಇಲ್ಲದೆ ಇರುವುದನ್ನು ಹೇಳಿ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಈ ಸಂದರ್ಭದಲ್ಲಿ ನೀವು ಜಾಗರೂಕರಾಗಿ ಅವರಿಗೆ ಸಮರ್ಥವಾಗಿ ಉತ್ತರ ಕೊಡೋದರ ಮೂಲಕ ತಿರುಗೇಟು ಕೊಡಬೇಕು.
ಸುಮ್ಮನೆ ಅವರು ಏನೋ ಹೇಳಿದ್ರು ಅಂತಾ ನೀವು ಏನೇನೋ ಹೇಳಿ, ಕೊನೆಗೆ ತಪ್ಪಿಗೆ ಸಿಕ್ಕಿಕೊಳ್ಳಬೇಡಿ.ಪ್ರವಾಹ ಪರಿಹಾರ ಕಾರ್ಯಗಳ ಸರ್ಕಾರ ಮಾಡಿದ್ದ ಕ್ರಮಗಳ ಬಗ್ಗೆ ಸಮರ್ಥವಾಗಿ ಉತ್ತರ ಕೊಡಿ ಎಂದು ತನ್ನ ಸಚಿವರಿಗೆ ಸಿಎಂ ಯಡಿಯೂರಪ್ಪ ಅವರು ಖಡಕ್ ಸೂಚನೆ ನೀಡಿದ್ದಾರೆ.
ನಿನ್ನೆಯ ಸದನದಲ್ಲಿ ಚಿಕ್ಕಮಗಳೂರಿನ ರೈತ ಆತ್ಮಹತ್ಯೆ ಪ್ರಕರಣದ ಚರ್ಚೆಯಲ್ಲಿ ಇಕ್ಕಟ್ಟಿಗೆ ಸಿಲುಕಿದ್ದ ಸಚಿವ ಸಿಟಿ ರವಿ. ರೈತ ಆತ್ಮಹತ್ಯೆ ಮಾಡಿಕೊಂಡ್ರು ಅವರ ಕುಟುಂಬಕ್ಕೆ ಇನ್ನೂ ಪರಿಹಾರ ಕೊಟ್ಟಿಲ್ಲ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಈ ವೇಳೆ ಬರಿಗೈಯಲ್ಲಿ ಹೋಗೋಕೆ ಆಗಲ್ಲ, ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಅವರು 5 ಲಕ್ಷ ಚೆಕ್ ಕೊಟ್ಟ ನಂತರವೇ ಹೋಗುತ್ತೇನೆ. ಅಧಿವೇಶನ ಮುಗಿಸಿ ರೈತನ ಮನೆಗೆ ಹೋಗ್ತೇನೆ ಎಂದಿದ್ದರು. ನಂತರ ಸಿದ್ದರಾಮಯ್ಯರ ಪ್ರತ್ಯುತ್ತರದಿಂದ ಏನೂ ಹೇಳೋದು ಎಂದು ಗೊಂದಲದಿಂದ ಸಚಿವ ಸಿಟಿ ರವಿ ಇಕ್ಕಟ್ಟಿಗೆ ಸಿಲುಕಿದ್ದರು.
ವಿಪಕ್ಷ ನಾಯಕರ ಚರ್ಚೆ ವೇಳೆ ಸಮಗ್ರ ಮಾಹಿತಿಯೊಂದಿಗೆ ಸರ್ಕಾರ ಸಮರ್ಥನೆ ಮಾಡುವ ನಿಟ್ಟಿನಲ್ಲಿ ಉತ್ತರವನ್ನು ಕೊಡಿ ಎಂದು ಸಿಎಂ ಹೇಳಿದ್ದಾರೆ.