ಹೈಕೋರ್ಟ್‍ಗೆ ಬಾಂಬ್ ಬೆದರಿಕೆ-ಉತ್ತರಪ್ರದೇಶ ಮೂಲದ ವ್ಯಕ್ತಿಯ ಬಂಧನ

ಬೆಂಗಳೂರು,ಅ.4- ಹೈಕೋರ್ಟ್‍ಗೆ ಬಾಂಬ್ ಬೆದರಿಕೆ ಹಾಕಿದ್ದ  ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೆÇಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಖಾನ್‍ಪುರ್, ಲಾಲ್‍ಕುರ್ತಿ ಬಜಾರ್ ನಿವಾಸಿ ರಾಜೇಂದ್ರ ಸಿಂಗ್(36) ಬಂಧಿತ ಆರೋಪಿ.

ಕೇಂದ್ರ ವಿಭಾಗದ ಉಪಪೆÇಲೀಸ್ ಆಯುಕ್ತ ಚೇತನ್‍ಸಿಂಗ್ ರಾಥೋಡ್ ಮಾರ್ಗದರ್ಶನದಲ್ಲಿ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ವಿಧಾನಸೌಧ ಠಾಣೆ ಇನ್‍ಸ್ಪೆಕ್ಟರ್ ಮಿರ್ಜಾ ಅಲಿರಾಜ  ಅವರು ನ್ಯಾಯಾಲಯದ ಆದೇಶದ ಮೇರೆಗೆ ಅರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ   ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ದೆಹಲಿಯ ಮೋತಿನಗರ ಸುದರ್ಶನ್ ಪಾರ್ಕ್ ಮೊದಲ ಮಹಡಿಯ ವಿಳಾಸದಿಂದ ಹರ್ಷವರ್ಧನ್ ಸಿಂಗ್ ಹೆಸರಿನಲ್ಲಿ ಹೈಕೋರ್ಟ್‍ಗೆ  ಸೆ.17ರಂದು ಬಾಂಬ್ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ತಾನು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗೆ ಸೇರಿದ್ದು ಸೆ.30ರಂದು ತಮ್ಮ ಮಗನೊಂದಿಗೆ ಹೈಕೋರ್ಟ್ ಕಟ್ಟಡದ ಹಲವು ಕಡೆಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಹೈಕೋರ್ಟ್ ರಿಜಿಸ್ಟರ್ ಜನರಲ್ ಅವರಿಗೆ ಪತ್ರ ಬಂದಿತ್ತು.

ಹೈಕೋರ್ಟ್ ಸೆಕ್ಯೂರಿಟಿ ವಿಭಾಗದ ಎಸಿಪಿ ಕುಮಾರ್ ಅವರು ಈ ಬಗ್ಗೆ ಕ್ರಮ ಜರುಗಿಸುವಂತೆ ವಿಧಾನಸೌಧ ಪೆÇಲೀಸರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೆÇಲೀಸರು ಆರೋಪಿ ಪತ್ತೆಗಾಗಿ ಕೇಂದ್ರ ವಿಭಾಗದ ಉಪಪೆÇಲೀಸ್ ಆಯುಕ್ತರ ನೇತೃತ್ವದಲ್ಲಿ ತಂಡ ರಚನೆ ಮಾಡಿ ದೆಹಲಿಗೆ ತೆರಳಿ ಆರೋಪಿ ಹರ್ಷವರ್ಧನ್ ಸಿಂಗ್‍ನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು.

ಆ ಸಂದರ್ಭದಲ್ಲಿ ತನ್ನ ಅಳಿಯ ರಾಜೇಂದ್ರ ಸಿಂಗ್ ಬೆದರಿಕೆ ಪತ್ರವನ್ನು ಅಂಚೆ ಮೂಲಕ  ನನ್ನ ವಿಳಾಸ ಕಳುಹಿಸಿರುವ ಬಗ್ಗೆ ಸಂಶಯವಿರುತ್ತದೆ ಎಂದು ಪೆÇಲೀಸರಿಗೆ ತಿಳಿಸಿದ್ದಾನೆ.

ಈತನ ಹೇಳಿಕೆ ಆಧರಿಸಿದ ಪೆÇಲೀಸ್ ತಂಡ, ಆರೋಪಿ ರಾಜೇಂದ್ರ  ಸಿಂಗ್‍ನ ಪತ್ತೆ ಕಾರ್ಯ ಕೈಗೊಂಡಾಗ ಈತನನ್ನು ಚೆನ್ನೈ ಬಿ-4 ಹೈಕೋರ್ಟ್ ಪೆÇಲೀಸರು ಬಂಧಿಸಿರುವುದು ಗೊತ್ತಾಗಿದೆ.

ತದನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯದ ಮೊರೆಹೋಗಿ ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ