ಮಹಾತ್ಮ ಗಾಂಧೀಜಿಯವರ ಸರಳತೆ ನಮಗೆ ಸ್ಪೂರ್ತಿದಾಯಕ : ಪ್ರಧಾನಿ ಮೋದಿ

ನವದೆಹಲಿ: ಮಹಾತ್ಮ ಗಾಂಧೀಜಿವರು ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಮಾನವೀಯತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ಬೆಳಗ್ಗೆ ದೆಹಲಿಯ ರಾಜಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ತೆರಳಿದ ಮೋದಿ ಬಾಪೂಜಿಗೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ. ಪ್ರೀತಿಯ ಬಾಪುಗೆ ನಮನಗಳು. ಮಾನವೀಯತೆಗೆ ಗಾಂಧೀಜಿಯವರು ನೀಡಿದ ಅಮೂಲ್ಯ ಕೊಡುಗೆಗಳಿಗೆ ನಮ್ಮ ಕೃತಜ್ಞತೆಗಳು. ಅವರ ಕನಸನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣತೊಟ್ಟು ಕೆಲಸ ಮಾಡೋಣ ಎಂದು ದೇಶಕ್ಕೆ ಕರೆ ನೀಡಿದ್ದಾರೆ.

 

ಗಾಂಧೀಜಿಯವರ 150ನೇ ಜಯಂತಿಯ ಈ ಸಮಯ ನಮಗೆ ಸತ್ಯ. ಅಹಿಂಸೆ, ಸಹಕಾರ, ನೈತಿಕತೆ ಮತ್ತು ಸರಳತೆಯ ಮೌಲ್ಯಗಳನ್ನು ನೆನಪಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಸಂದರ್ಭವಾಗಿದೆ. ಅವರ ಸಂದೇಶಗಳು ನಮಗೆ ಪ್ರಸ್ತುತವಾಗಿದ್ದು ಅವರ ಮಾರ್ಗದರ್ಶನಗಳು ಎಂದೆಂದಿಗೂ ದಾರಿದೀಪ ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಗಾಂಧೀಜಿಯವರನ್ನು ಸ್ಮರಿಸಿದ್ದಾರೆ.

ರಾಜ್ ಘಾಟ್ ನಲ್ಲಿರುವ  ಮಹಾತ್ಮ ಗಾಂಧಿ ಸಮಾಧಿಗೆ ಸೋನಿಯಾ ಗಾಂಧಿ , ಮಾಜಿ ಪ್ರಧಾನಿ ಮನಮೋಹನ್ ಸಿಂಗ್ , ಎಲ್. ಕೆ ಅಡ್ವಾಣಿ, ಜೆ.ಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಪುಷ್ಪನಮನ ಸಲ್ಲಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ