ಕಾಶ್ಮೀರಕ್ಕೆ ಮೊದಲಿನಂತೆ ಸ್ವಾಯತ್ತತೆ ನೀಡಬೇಕು; ಭಾರತಕ್ಕೆ ಪಾಕ್​​ ಒತ್ತಾಯ

ನವದೆಹಲಿ: ಕಾಶ್ಮೀರಕ್ಕೆ ಮೊದಲಿನಂತೆಯೇ ವಿಶೇಷ ಸ್ಥಾನಮಾನ ನೀಡದಿದ್ದರೆ ಭಾರತದ ಜೊತೆಗೆ ಮಾತುಕತೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಹೇಳಿದ್ದಾರೆ. ಮೂಲಕ 370ನೇ ವಿಧಿ ರದ್ದುಗೊಳಿಸಿದ ಆದೇಶ ಹಿಂಪಡೆಯಯುವಂತೆ ಭಾರತ ಸರ್ಕಾರಕ್ಕೆ ಮತ್ತೆ ಆಗ್ರಹಿಸಿದ್ದಾರೆ.

ಇಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ನಡೆಯಲಿದೆ. ಪಾಕಿಸ್ತಾನ ಮತ್ತು ಭಾರತ ಸೇರಿದಂತೆ ಹಲವು ದೇಶಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಅಂತರಾಷ್ಟ್ರೀಯ ರಾಜಕೀಯ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇಲ್ಲಿ ಕಾಶ್ಮೀರ ವಿಚಾರವೂ ಮತ್ತೆ ಪ್ರಸ್ತಾಪವಾಗಲಿದೆ.

ನಿನ್ನೆಯೂ ಗುರುವಾರ ಸಾರ್ಕ್​​ ದೇಶಗಳ ವಿದೇಶಾಂಗ ಸಚಿವರ ಮಂಡಳಿ ಸಭೆ ನಡೆದಿತ್ತು. ಇಲ್ಲಿನ ಸಭೆಯಲ್ಲಿ ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಹೇಳಿಕೆಗೆ ಬಹಿಷ್ಕಾರ ಹಾಕಿದರು.

ಇನ್ನು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಭಾರತ ಮತ್ತೆ ಕಾಶ್ಮೀರಕ್ಕೆ ಮೊದಲಿನ ಸ್ವಾಯತ್ತತೆ ನೀಡಬೇಕು. ಕಾಶ್ಮೀರ ಜನತೆಯ ಮಾನವ ಹಕ್ಕುಗಳನ್ನು ಭಾರತ ಸರ್ಕಾರ ರಕ್ಷಿಸಬೇಕು. ಆಗ ಮಾತ್ರ ನಾವು ಭಾರತದ ಜೊತೆಗೆ ಮಾತುಕತೆ ಮಾಡುತ್ತೇವೆ ಎನ್ನುವ ಮೂಲಕ ಸಾರ್ಕ್ ಸಭೆಯಲ್ಲಿ ಸಚಿವ ಜೈಶಂಕರ್ ಹೇಳಿಕೆಗೆ ಖುರೇಷಿ ವಿರೋಧ ವ್ಯಕ್ತಪಡಿಸಿದರು.

ಈ ಮುನ್ನ ಜಮ್ಮು-ಕಾಶ್ಮೀರದ ವಿವಾದವನ್ನು ಕೋಮು ದೃಷ್ಟಿಯಿಂದ ನೋಡಲೇಬೇಡಿ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಹೇಳಿದ್ದರು. ಭಾರತದ ಪ್ರಮುಖ ಇಸ್ಲಾಮಿಕ್​​ ಸಂಘಟನೆಯೊಂದು ಕಣಿವೆ ರಾಜ್ಯದಲ್ಲಿ ಬದಲಾವಣೆ ಬಯಸಿದೆ. ಕಳೆದ ಐದು ವರ್ಷಗಳಿಂದಲೂ ಇಸ್ಲಾಮಿಕ್​​ ದೇಶಗಳೊಂದಿಗೆ ಭಾರತದ ಸಂಬಂಧವೂ ಉತ್ತಮವಾಗಿದೆ. ಹೀಗಿರುವಾಗ ಭಾರತ ಸರ್ಕಾರಕ್ಕೆ ಮುಸ್ಲಿಮರ ವಿರೋಧಿ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದಿದ್ದರು.

ಭಾರತ ಹಿಂದೂ ರಾಷ್ಟ್ರ. ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ ಎಂಬ ಧೋರಣೆ ನಾನು ಒಪ್ಪೋದಿಲ್ಲ. ನಮ್ಮ ದೇಶದ ಪ್ರಮುಖ ಇಸ್ಲಾಮಿಕ್​ ಸಂಘಟನೆಗಳ ವಾರ್ಷಿಕ ಸಭೆಗಳಲ್ಲಿ ನಾವು ಭಾಗಿಯಾಗುತ್ತೇವೆ. ಕಾಶ್ಮೀರದಲ್ಲಿ ಬದಲಾವಣೆ ಬೇಕು ಎಂದು ಮುಸ್ಲಿಮರೇ ಕೇಳಿದ್ದಾರೆ. ನಾವು ಕಾಶ್ಮೀರದ ಸಮಸ್ಯೆಗಳನ್ನು ಪರಿಹಾರ ಮಾಡುವತ್ತ ಹೆಜ್ಜೆ ಹಾಕಿದ್ದೇವೆ. ಆದ್ದರಿಂದ ಇದನ್ನು ಕೋಮುದೃಷ್ಟಿಯಿಂದ ನೋಡಬೇಡಿ ಎಂದು ಮನವಿ ಮಾಡಿದ್ದರು ಎಸ್​​ ಜೈಶಂಕರ್​​​.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ