ಬೆಂಗಳೂರು: ಹೊಸ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ಭಾರಿ ದಂಡ ವಿಧಿಸಲಾಗುತ್ತಿದೆ. ಹೊಸ ಕಾನೂನು ದೇಶಾದ್ಯಂತ ಸೆಪ್ಟೆಂಬರ್ 3ರಿಂದ ಜಾರಿಗೆ ಬಂದಿದೆ. ದುಬಾರಿ ದಂಡಕ್ಕೆ ಬೇಸತ್ತ ಸಾರ್ವಜನಿಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಗುಜರಾತ್ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ದುಬಾರಿ ದಂಡವನ್ನು ಇಳಿಕೆ ಮಾಡಿದೆ.
ಇಂದು ಈ ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಅದರಂತೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಇಷ್ಟು ಪ್ರಮಾಣದಲ್ಲಿ ದಂಡ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಆದರೆ, ಕುಡಿದು ವಾಹನ ಚಾಲನೆ ಮಾಡುವವರಿಗೆ ಮಾತ್ರ ದಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ಕಾನೂನಿನಂತೆ ಇದ್ದ 10 ಸಾವಿರ ದಂಡವನ್ನು ರಾಜ್ಯ ಸರ್ಕಾರ ಮುಂದುವರಿಸಿದೆ.
ತಪ್ಪು ದಂಡದ ಮೊತ್ತ ಮೊದಲಿದ್ದ ದಂಡ
- ಹೆಲ್ಮೆಟ್ ರಹಿತ ಚಾಲನೆ 500 1000
- ಸೀಟ್ ಬೆಲ್ಟ್ ರಹಿತ ಚಾಲನೆ 500 1000
- ಪರವಾನಗಿರಹಿತ ಬೈಕ್ 1000 5000
- ಪರವಾನಗಿರಹಿತ ಕಾರು, ಜೀಪು 2000 5000
- ಪರವಾನಗಿರಹಿತ ಭಾರೀ ವಾಹನ 4000 5000
- ನೋಂದಣಿಯಾಗದ ಬೈಕ್ 2000 5000
- ಕುಡಿದು ವಾಹನ ಚಾಲನೆ 10000 10000