ವಾಷಿಂಗ್ಟನ್, ಸೆ.19- ಚಂದ್ರಯಾನ-2 ಅಭಿಯಾನದಲ್ಲಿ ಚಂದಿರನ ಮೇಲ್ಮೈ ಮೇಲೆ ಇಳಿಯುವ ಕೊನೆಕ್ಷಣದಲ್ಲಿ ಇಸ್ರೋದಿಂದ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ನನ್ನು ಪತ್ತೆ ಮಾಡಲುವಲ್ಲಿ ಅಮೆರಿಕಾದ ಸಂಶೋಧನಾ ಸಂಸ್ಥೆ ನಾಸಾ ಕೂಡ ವಿಫಲವಾಗಿದೆ.
ಲ್ಯಾಂಡರ್ ಪತ್ತೆಗಾಗಿ ಇಸ್ರೋಗೆ ನೆರವು ನೀಡಲು ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಆರ್ಒ ಆರ್ಬಿಟರ್ ವಿಕ್ರಮ್ನನ್ನು ಪತ್ತೆ ಮಾಡಲು ಸಫಲವಾಗಿಲ್ಲ.
ಎಲ್ಆರ್ಒ ಆರ್ಬಿಟರ್ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದ ವೀಕ್ಷಣೆ ಕ್ಷೇತ್ರದ ವ್ಯಾಪಿಯೊಳಗೆ ವಿಕ್ರಮ್ ಲ್ಯಾಂಡರ್ ಕಂಡುಬರಲಿಲ್ಲ ಎಂದು ನಾಸಾ ತಿಳಿಸುವ ಮೂಲಕ ತನ್ನ ಅಸಹಾಯಕತೆಯನ್ನು ಇಸ್ರೋಗೆ ತಿಳಿಸಿದೆ.
ಕಳೆದ ಹತ್ತು ವರ್ಷಗಳಿಂದ ಚಂದ್ರಕಕ್ಷೆಯ ಸುತ್ತ ಪ್ರದಕ್ಷಣೆ ಹಾಕುತ್ತಿರುವ ಎಲ್ಆರ್ಒ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇಳಿಯಲು ಧಾವಿಸಿದ್ದ ಕೊನೆಕ್ಷಣದ ಸ್ಥಳದಲ್ಲಿ ನಿನ್ನೆಯಿಂದ ತೀವ್ರ ಶೋಧ ಕಾರ್ಯ ನಡೆಸಿತ್ತು. ಆದರೆ ವಿಕ್ರಮ್ನ ಸುಳಿವು ಪತ್ತೆಯಾಗಿಲ್ಲ.
ನಾಸಾದಿಂದಲೂ ವಿಕ್ರಮ್ ಲ್ಯಾಂಡರ್ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಇಸ್ರೋಗೆ ಬೇಸರವಾಗಿದೆ.
ಸೆ. 7ರಂದು ಚಂದ್ರನ ಮೇಲ್ಮೈ ಇಳಿಯುವ ಕೊನೆಯಕ್ಷಣದಲ್ಲಿ ಕೇವಲ 400ಮೀಟರ್ ಅಂತರದಲ್ಲಿ ಇಸ್ರೋ ಜೊತೆ ಸಂಪರ್ಕ ಕಡಿತಗೊಂಡಿತ್ತು. ನಂತರ ಇದರ ಪೋಟೊಗಳನ್ನು ಆರ್ಬಿಟರ್ ರವಾನಿಸಿತ್ತಾದರೂ ನಂತರ ಇದರ ಬಗ್ಗೆ ಯಾವುದೇ ಮಾಹಿತಿ ಮತ್ತು ಸುಳಿವು ಪತ್ತೆಯಾಗಿಲ್ಲ.