ನಿರಂತರ ಖ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಭಾರತದಿಂದ ತರಾಟೆ

ನವದೆಹಲಿ, ಸೆ.19- ಒಂದರ ಮೇಲೆ ಒಂದರಂತೆ ನಿರಂತರ ಖ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ತೆರಳಲು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಅನುಮತಿ ನೀಡದಿರುವ ಇಸ್ಲಾಮಾಬಾದ್‍ನ ಕ್ರಮವನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ನಡವಳಿಕೆಗಳು ಮತ್ತು ಧೋರಣೆಗಳು ಅಂತಾರಾಷ್ಟ್ರೀಯ ಉಲ್ಲಂಘನೆಯಾಗಿದೆ ಎಚ್ಚರಿಕೆ ನೀಡಿದರು.

ಎರಡು ವಾರಗಳಲ್ಲಿ ಎರಡನೇ ಬಾರಿಗೆ ಅತಿಗಣ್ಯ ವ್ಯಕ್ತಿಗಳ(ವಿವಿಐಪಿ) ವಾಯುಪ್ರದೇಶವನ್ನು ನಿರಾಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ನಾವು ವಿಷಾದಿಸುತ್ತೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‍ಕುಮಾರ್ ತಿಳಿಸಿದ್ದಾರೆ.

ಪಾಕಿಸ್ತಾನದ ಈ ವರ್ತನೆಗೆ ಭಾರತ ತನ್ನ ಆಕ್ಷೇಪಣೆಯನ್ನು ದಾಖಲಿಸಿದೆ. ಈ ಧೋರಣೆ ಅಂತಾರಾಷ್ಟ್ರೀಯ ವಾಯು ಸರಹದ್ದು ನಿಯಮಗಳ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ ಎಂದು ಕುಮಾರ್ ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ