ಬೆಂಗಳೂರು,ಸೆ.18- ಹಬ್ಬದ ಸಂದರ್ಭದಲ್ಲೇ ಸತತವಾಗಿ ಒಂದು ವಾರಗಳ ಕಾಲ ಬ್ಯಾಂಕ್ ರಜೆ ಬರಲಿದ್ದು, ಅವಶ್ಯಕ ಕೆಲಸ ಕಾರ್ಯಗಳನ್ನು ಮೊದಲು ಅಥವಾ ನಂತರ ಮಾಡಿಕೊಳ್ಳಬೇಕಾಗಿದೆ.
ಸೆ.26 ಮತ್ತು 27ರಂದು ಬ್ಯಾಂಕ್ಗಳ ಮುಷ್ಕರವಿದ್ದು, ಅಂದು ಬ್ಯಾಂಕ್ಗಳು ಕಾರ್ಯ ನಿರ್ವಹಿಸುತ್ತಿಲ್ಲ. 28ರಂದು ನಾಲ್ಕನೇ ಶನಿವಾರವಾದ್ದರಿಂದ ಸಹಜವಾಗಿ ಬ್ಯಾಂಕ್ ರಜೆ ಇರಲಿದೆ. ಇನ್ನು 29ರಂದು ಭಾನುವಾರದ ಕಾರಣ ಬ್ಯಾಂಕ್ನ ಕೆಲಸ ಕಾರ್ಯಗಳಿಗೆ ಬಿಡುವುದು. ಇದರೊಟ್ಟಿಗೆ ಅರ್ಧ ವಾರ್ಷಿಕ ದಿನವಾದ ಸೆ.30ರಂದು ಸಹ ಬ್ಯಾಂಕ್ಗೆ ರಜೆ ಇರಲಿದೆ.
ಹಾಗಾಗಿ ಮಹಾಲಯ ಅಮಾವಾಸ್ಯೆಗೂ ಎರಡು ದಿನ ಮುನ್ನವೇ ಬ್ಯಾಂಕ್ ರಜೆ ಇದ್ದು ಹಬ್ಬಕ್ಕೆ ಪರದಾಡುವ ಪರಿಸ್ಥಿತಿ ಎದುರಾಗುವ ಮುನ್ನ ಮುನ್ನೆಚ್ಚರಿಕೆ ವಹಿಸಿ ಬ್ಯಾಂಕ್ಗಳಿಂದ ಆಗಬೇಕಾದ ಕೆಲಸಕಾರ್ಯಗಳನ್ನು ಮಾಡಿಕೊಳ್ಳಬೇಕಾಗಿದೆ. ಸತತ ಬ್ಯಾಂಕ್ ರಜೆಯಿಂದಾಗಿ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಅಕ್ಟೋಬರ್ 2ರಂದು ಗಾಂಧಿ ಜಯಂತಿ ಅಂಗವಾಗಿ ಬ್ಯಾಂಕ್ಗೆ ಬಿಡುವಿರವುದರಿಂದ ಒಟ್ಟಾರೆ ಸಾರ್ವಜನಿಕರು ಈ ಬಗ್ಗೆ ಗಮನಹರಿಸುವುದು ಸೂಕ್ತ