
ಬೆಂಗಳೂರು,ಸೆ.17- ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಇಂದು ಗಣಪತಿ ವಿಸರ್ಜನೆ ವೇಳೆ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಡ್ಯಾನ್ಸ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಸೂಲಿಬೆಲೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಂಟಿಬಿ ನಾಗರಾಜ್, ವಾದ್ಯನಾದಗಳಿಂದ ಪ್ರಚೋದಿತರಾಗಿ ನೃತ್ಯ ಮಾಡಲಾರಂಭಿಸಿದರು.
ನೃತ್ಯದ ವೇಳೆ ತಮ್ಮ ಬಾಯಿಯಲ್ಲಿ ನಿಂಬೆಹಣ್ಣು ಕಚ್ಚಿಕೊಂಡಿದ್ದು ವಿಶೇಷವಾಗಿತ್ತು.ಸುಮಾರು ಐದಾರು ನಿಮಿಷ ನೃತ್ಯ ಮಾಡಿದ ಮಾಜಿ ಸಚಿವರು ಎಲ್ಲರ ಗಮನಸೆಳೆದರು.
ಈ ಹಿಂದೆ ಇದೇ ರೀತಿ ಸಾರ್ವಜನಿಕವಾಗಿ ನೃತ್ಯ ಮಾಡುವ ಮೂಲಕ ಎಂ.ಟಿ.ಬಿ.ನಾಗರಾಜ್ ಅವರು ಚರ್ಚೆಗೆ ಗ್ರಾಸವಾಗಿದ್ದರು.
ಇದಕ್ಕೂ ಮುನ್ನ ಹೊಸಕೋಟೆ ತಾಲ್ಲೂಕಿನ ಕಾಳಪ್ಪನಹಳ್ಳಿಯ ಭದ್ರಕಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರವ ಕೊಡೆ ಚಾಮುಂಡಿ ಭಜನಾ ಗೀತೆಯನ್ನು ಹಾಡಿ ಪ್ರಾರ್ಥನೆ ಸಲ್ಲಿಸಿದರು.