ನವದೆಹಲಿ: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮುದಾಸೀರ್ ಅಹ್ಮದ್ ಖಾನ್ ನ ಆಪ್ತ ಸಹಾಯಕ ಸಜ್ಜಾದ್ ಅಹ್ಮದ್ ಖಾನ್ ಸೇರಿದಂತೆ ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ಚಾರ್ಜ್ಶೀಟ್ ಸಲ್ಲಿಸಿದೆ.
ದೆಹಲಿ-ಎನ್ಸಿಆರ್ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾದ್ ಮತ್ತು ಇತರ ಮೂವರು ಜೆಎಂ ಭಯೋತ್ಪಾದಕರು ಯೋಜಿಸುತ್ತಿದ್ದಾರೆ ಎಂದು ಎನ್ಐಎ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ಸಜ್ಜಾದ್ ಜೊತೆಗೆ, JeM ಭಯೋತ್ಪಾದಕರಾದ ತನ್ವೀರ್ ಅಹ್ಮದ್ ಗನಿ(29), ಬಿಲಾಲ್ ಅಹ್ಮದ್ ಮಿರ್(23) ಮತ್ತು ಮುಜಾಫರ್ ಅಹ್ಮದ್ ಭಟ್(25) ಹೆಸರನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
“ಆರೋಪಿಗಳು JeM ನಿಷೇಧಿತ ಸಂಘಟನೆಯ ಭಾಗವಾಗಿದ್ದು, ಮುದಾಸೀರ್ ಅಹ್ಮದ್ ಖಾನ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೆ, ದೆಹಲಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಪುಲ್ವಾಮಾದಂತಹ ದಾಳಿಗಳನ್ನು ನಡೆಸಲು ಯೋಜಿಸಿದ್ದರು ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ಐಪಿಸಿ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 121 ಎ ಮತ್ತು ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.