ಬೆಂಗಳೂರು, ಸೆ.15-ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನೆಡೆಯುವುದು ಅತ್ಯಗತ್ಯ ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿಂದು ಡಾ. ಸಿ.ಸೋಮಶೇಖರ-ಶ್ರೀಮತಿ ಎನ್.ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ 5ನೇ ವರ್ಷದ ಸಂಸ್ಕøತಿ ಸಂಗಮ -2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವಮಾನ ಸಾಧನೆ ಮಾಡಿರುವ ಹಿರಿಯ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.
ಸಂಸ್ಕøತಿ ಎಂಬುವುದು ಆಧಾರ ಸ್ಥಂಭ, ಇದರಲ್ಲಿ ಕೊರತೆ ಉಂಟಾದರೆ ಅದು ನಾಶವಾಗುತ್ತದೆ. ಆದ್ದರಿಂದ ಹಿರಿಯರು ಮಕ್ಕಳಲ್ಲಿ ಸಂಸ್ಕøತಿಯನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಂಸ್ಕøತಿಯನ್ನು ನಾವು ಮೊದಲು ಅಳವಡಿಸಿಕೊಂಡು ನಂತರ ಉಪದೇಶ ಮಾಡಬೇಕು. ಜಗತ್ತಿನಲ್ಲಿ ನಗು-ಸಮಯ ಒಟ್ಟಾಗಿ ಜೋಡಣೆಯಾಗುವುದು ಕಷ್ಟ ಎಂದು ಹೇಳಿದರು.
ಸಚಿವ ವಿ.ಸೋಮಣ್ಣ ಮಾತನಾಡಿ, ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಸಾಕಷ್ಟು ಜನ ನಿರಾಶ್ರಿತರಾಗಿದ್ದಾರೆ. ರಾಜ್ಯ ಸರ್ಕಾರದಿಂದ ಮನೆಯಿಲ್ಲದವರಿಗೆ 5ಲಕ್ಷ ರೂ. ಕೊಡುವುದಾಗಿ ನಿರ್ಧರಿಸಲಾಗಿದೆ. ಉತ್ತಮ ಮಳೆಯಿಂದಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನೀರಿನ ಕೊರತೆಯನ್ನು ನೀಗಿಸಲು ಸಾಧ್ಯ ಎಂದು ತಿಳಿಸಿದರು.
ವಚನಸಾಹಿತ್ಯ, ದಾಸಸಾಹಿತ್ಯ, ಜನಪದಸಾಹಿತ್ಯ, ನೃತ್ಯ, ಇವೆಲ್ಲ ನಮ್ಮ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಸೋಮಶೇಖರ ದಂಪತಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ವಿಷಯ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಒ.ಎಲ್.ನಾಗಭೂಷಣಸ್ವಾಮಿ, ದಾಸಸಾಹಿತ್ಯ ಕ್ಷೇತ್ರದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಜಾನಪದ ಕ್ಷೇತ್ರದಲ್ಲಿ ನಾಡೋಜ ಯಲ್ಲವ್ವ ದುರ್ಗಪ್ಪ ದೊಡ್ಡಪ್ಪ, ಸಂಗೀತ ಕ್ಷೇತ್ರದಲ್ಲಿ ವೀರೇಶ ಕಿತ್ತೂರು, ನೃತ್ಯ ವೈಜಯಂತಿ ಕಾಶಿ ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರಿನ ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಾಹಿತಿ ಚಂದ್ರಶೇಖರ ಕಂಬಾರ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.