ಭೋಪಾಲ್: ಚಿತ್ರ ವಿಚಿತ್ರ ಹವ್ಯಾಸಗಳನ್ನು ರೂಢಿಸಿಕೊಂಡವರನ್ನು ಜಗತ್ತಿನಲ್ಲಿ ಇರುತ್ತಾರೆ. ಅವರ ಸಾಲಿಗೆ ಮಧ್ಯಪ್ರದೇಶದ ವಕೀಲರೊಬ್ಬರು ಸೇರಿದ್ದು, ಅವರಿಗೆ ಗಾಜಿನ ಚೂರು ತಿನ್ನುವ ವಿಚಿತ್ರ ಹವ್ಯಾಸವಿದೆ.
ಮಧ್ಯಪ್ರದೇಶದ ವಕೀಲ ದಯಾರಾಮ್ ಸಾಹು ಕಳೆದ 40 ರಿಂದ 45 ವರ್ಷಗಳಿಂದ ಗಾಜಿನ ಚೂರುಗಳನ್ನು ತಿನ್ನುತ್ತಿದ್ದಾರೆ. ಅವರು ಗಾಜುಗಳ ಚೂರುಗಳನ್ನು ತಿನ್ನುತ್ತಿರುವ ವಿಡಿಯೋ ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ದಯಾರಾಮ್ ಮಾತನಾಡಿ, ನನಗೆ ಇದು ಹವ್ಯಾಸವಾಗಿ ಬಿಟ್ಟಿದೆ. ಇದರಿಂದ ನನ್ನ ಹಲ್ಲುಗಳು ಗಾಯವಾಗಿವೆ. ಇತ್ತೀಚೆಗೆ ಗಾಜು ತಿನ್ನುವುದು ಕಡಿಮೆ ಮಾಡಿದ್ದೇನೆ. ಇದನ್ನು ಯಾರು ಮಾಡಬೇಡಿ. ಇದು ಆರೋಗ್ಯಕ್ಕೆ ಹಾನಿಕಾರಕ, ಯಾರು ಇಂತಹ ಹವ್ಯಾಸ ರೂಢಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಗಾಜು ತಿನ್ನುವುದರಿಂದ ಮನುಷ್ಯನ ಒಳಗಿನ ಎಲ್ಲಾ ಭಾಗಗಳು ಹಾನಿಗೊಳಗಾಗುತ್ತವೆ. ಆದ್ದರಿಂದ ಈ ರೀತಿ ಯಾರು ಗಾಜನ್ನು ತಿಂದು ಜೀವಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಹಿಮಾಚಲ್ ಪ್ರದೇಶದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ವೈದ್ಯರು 8 ಚಮಚ, 2 ಸ್ಕ್ರೂ ಡ್ರೈವರ್, 2 ಟೂತ್ಬ್ರೆಶ್, ಚಾಕು ಹಾಗೂ ಇತರೇ ವಸ್ತುಗಳನ್ನು ಹೊರತೆಗೆದಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆಗಿ ಭಾರೀ ಸುದ್ದಿಯಾಗಿತ್ತು.