ಬೆಂಗಳೂರು, ಸೆ.14- ತಿನ್ನುವುದಕ್ಕೆ ಕೂಳಿಲ್ಲ; ಕುಡಿಯಲು ನೀರಿಲ್ಲ; ಸೂರಿಲ್ಲ; ಬದುಕಿಗಾಗಿ ಹೆಣಗಾಡುತ್ತಿದ್ದೇವೆ. ಪ್ರವಾಹದಿಂದ ಇದ್ದಬದ್ದ ಸಾಮಾನು-ಸರಂಜಾಮುಗಳೆಲ್ಲ ಕೊಚ್ಚಿ ಹೋಗಿವೆ. ಜಮೀನು, ಬೆಳೆಯೆಲ್ಲಾ ಹಾಳಾಗಿವೆ. ಬೀದಿಗೆ ಬಿದ್ದು ಒಂದು ತಿಂಗಳಾಗಿದೆ.ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಈ ನಡುವೆ ಸಂಕಷ್ಟದಲ್ಲಿರುವ ಸಂತ್ರಸ್ಥರಿಗೆ ಬ್ಯಾಂಕಿನಿಂದ ಅರೆಸ್ಟ್ ವಾರೆಂಟ್ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಒಂದು ತಿಂಗಳಿನಿಂದ ಉತ್ತರ ಕರ್ನಾಟಕದ ರೈತರು ಪ್ರವಾಹದಿಂದ ತತ್ತರಿಸಿಹೋಗಿದ್ದರು.ಮನೆ ಮಠ ಕಳೆದುಕೊಂಡು, ಬದುಕು ಬರ್ಬಾದ್ ಆಗಿ ಪರಿಹಾರ ಕೇಂದ್ರದಿಂದ ಆಶ್ರಯ ಪಡೆದಿದ್ದರು.ಜಮೀನಿನಲ್ಲಿದ್ದ ಬೆಳೆಯೆಲ್ಲಾ ಕೊಚ್ಚಿ ಹೋಗಿ ದಿಕ್ಕೆಟ್ಟು ಹೋಗಿದ್ದು ಸಂತ್ರಸ್ತ ರೈತರಿಗೆ ಈಗ ಬ್ಯಾಂಕ್ನಿಂದ ಸಾಲ ವಸೂಲಾತಿಯ ಅರೆಸ್ಟ್ ವಾರೆಂಟ್ ಬಂದಿರುವುದು ಶಾಕ್ ಮೇಲೆ ಶಾಕ್ ನೀಡಿದಂತಾಗಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಏಣಗಿ ಗ್ರಾಮದ ರೈತ ಈರಪ್ಪ ಹುಬ್ಬಳ್ಳಿ ಅವರಿಗೆ ಸಾಲ ತೀರಿಸಿಲ್ಲ ಎಂದು ಯಾವುದೇ ಸಮನ್ಸ್ ನೀಡದೆ ಪೆÇಲೀಸರು ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ. ಮಲಪ್ರಭಾ ನದಿ ತಟದಲ್ಲಿದ್ದ ಇವರ 11 ಎಕರೆ ಜಮೀನು ಪ್ರವಾಹ ಸಿಲುಕಿ ಬೆಳೆಯೆಲ್ಲಾ ಕೊಚ್ಚಿ ಹೋಗಿದೆ.2014ರಲ್ಲಿ ಐಸಿಐಸಿಐ ಬ್ಯಾಂಕ್ನಿಂದ 2.67 ಲಕ್ಷ ಸಾಲ ಮಾಡಿದ್ದ ಇವರು, ಈಗ ಅದು 4.70 ಲಕ್ಷ ಆಗಿದೆ.ಸರ್ಕಾರ ಸಾಲ ಮನ್ನಾ ಮಾಡುವುದಾಗಿ ಹೇಳಲಾಗಿತ್ತಾದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡಿರುವ ರೈತರು ಅರೆಸ್ಟ್ ವಾರೆಂಟ್ನಿಂದ ತಲೆಮರೆಸಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
2016ರಲ್ಲಿ ಈ ಸಾಲಕ್ಕೆ ಸಂಬಂಧಿಸಿದ ಬಡ್ಡಿಯನ್ನು ಪಾವತಿಸಲಾಗಿತ್ತು.ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಇವರಿಗೆ ಸರ್ಕಾರ ನೆರವಿಗೆ ಬರಬೇಕಾಗಿತ್ತು.ಆದರೆ ಅರೆಸ್ಟ್ ವಾರೆಂಟ್ ಬಂದಿರುವುದು ಈ ಭಾಗದಲ್ಲಿ ಸಾಲ ಮಾಡಿರುವ ರೈತರನ್ನು ಕಂಗೆಡಿಸಿದೆ.
ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಉತತಿರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಭಾರೀ ಹಾನಿಯಾಗಿ ಲP್ಷÁಂತರ ಜನ ನಿರಾಶ್ರಿತರಾಗಿದ್ದರು.ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಸಂತ್ರಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಪರಿಹಾರ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಜನರು ಇನ್ನೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಈ ನಡುವೆ ಅರೆಸ್ಟ್ ವಾರೆಂಟ್ ಬಂದಿರುವುದು ಮತ್ತಷ್ಟು ಭಯಭೀತರನ್ನಾಗಿಸಿದೆ.
ಎಚ್ಡಿಕೆ ಅಸಮಾಧಾನ:
ಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಸ್ಪಂದಿಸಬೇಕಾಗಿತ್ತು.ಆದರೆ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ.ಯಾವುದೇ ನೋಟೀಸ್ ನೀಡದೆ ಏಕಾಏಕಿ ಅರೆಸ್ಟ್ ವಾರಂಟ್ ಹೊರಡಿಸಿರುವುದು ಅತ್ಯಂತ ಖಂಡನೀಯ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳೊಂದಿಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.