ಉಸಿರುವವರೆಗೂ ಕನ್ನಡ ನಾಡುನುಡಿಗಾಗಿ ಹೋರಾಟ ಮಾಡುತ್ತೇನೆ-ವಾಟಾಳ್ ನಾಗರಾಜ್

ಬೆಂಗಳೂರು, ಸೆ.14- ಬೆಂಗಳೂರಿನಲ್ಲಿ ಕನ್ನಡ ಚಳವಳಿ ಭಾರೀ ಪ್ರಮಾಣದಲ್ಲಿ ಆಗಬೇಕು ಎಂದು ಕರೆ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದರು.
ಪುರಭವನದಲ್ಲಿ ಹಮ್ಮಿಕೊಂಡಿದ್ದ ವಾಟಾಳ್ ನಾಗರಾಜ್ ಅವರಿಗೆ ದಶಕಗಳ ಹಿಂದೆ ಬೂಟೇಟು ಬಿದ್ದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಳವಳಿಯಲ್ಲಿ ಜಾತಿ ಇರುವುದಿಲ್ಲ. ಕೋಮುವಾದ ಇರುವುದಿಲ್ಲ. ನಾವೆಲ್ಲರೂ ಒಂದೇ ಎಂದರು.
ಈ ಸಮಾರಂಭ ವರ್ಷಕ್ಕೆ ಒಂದು ಬಾರಿ ಬರುತ್ತದೆ. ಇದು ಕನ್ನಡಿಗರ ಪರ ಹೋರಾಟ ಮಾಡುವ ಒಂದು ಸಮಾರಂಭವಾಗಿದೆ.1962-72ರ ಚಳವಳಿಗಳನ್ನು ನೆನಪಿಸಿಕೊಂಡರು.

ಯಾರಿಗೂ ತಲೆ ಭಾಗದೆ ಸತ್ಯಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡಿದಾಗ ನ್ಯಾಯ ಸಿಗುತ್ತದೆ.ನನ್ನ ಉಸಿರು ಇರುವವರೆಗೂ ಕನ್ನಡ ನಾಡುನುಡಿಗಾಗಿ ಹೋರಾಟ ಮಾಡುತ್ತಲೇ ಇರುತ್ತೇನೆ. ಇದು ನನ್ನ ಕರ್ತವ್ಯ. ಎಲ್ಲೆಲ್ಲೂ ಆಂಗ್ಲ ಫಲಕಗಳು ರಾಜಾಜಿಸುತ್ತಿವೆ. ಇವುಗಳನ್ನು ಮೊದಲು ತೊಲಗಿಸಬೇಕು. ಅ.1ರಿಂದ ಬೆಂಗಳೂರಿನಲ್ಲಿ ಕನ್ನಡ ಚಳವಳಿ ನಡೆಯಲೇಬೇಕು ಎಂದು ಹೇಳಿದರು.

ವಾಟಾಳ್ ಪುತ್ರಿ ಅನುಪಮ ಮಾತನಾಡಿ, ನಮ್ಮ ತಂದೆ ಹುಟ್ಟಿದ ದಿನ ನಮ್ಮ ಕುಟುಂಬದವರ್ಯಾರಿಗೂ ಗೊತ್ತಿಲ್ಲ. ಆದರೆ ನಮ್ಮ ತಂದೆ ಬೂಟೇಟು ತಿಂದ ದಿನವನ್ನೇ ಅವರ ಹುಟ್ಟುಹಬ್ಬವೆಂದು ಆಚರಿಸುತ್ತೇವೆ ಎಂದು ಹೇಳಿದರು.
ನಮ್ಮ ತಂದೆ ನಡೆದ ದಾರಿ ಸರಿ. ಅವರ ಹೋರಾಟವೂ ಸರಿ. ಯುವಜನತೆ ನಮ್ಮ ತಂದೆಯವರನ್ನು ನೋಡಿ ತುಂಬ ಕಲಿಯಬೇಕಿದೆ.ಸದಾಕಾಲ ನಮಗೆ ಅವರು ಆದರ್ಶರಾಗಿದ್ದಾರೆ ಎಂದರು.

ಸೋಲೇ ಬರಲಿ, ಗೆಲುವು ಬರಲಿ ನಮ್ಮ ತಂದೆಯ ಹೋರಾಟ ನಿರಂತರ.ತಮ್ಮ ಜೊತೆ ಯಾರು ಬಾರದಿದ್ದರೂ ಏಕಾಂಗಿಯಾದರೂ ಹೋರಾಟ ಮಾಡುತ್ತೇನೆ ಎಂದು ನಮ್ಮ ತಂದೆ ನಮಗೆ ತಿಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಟಿ.ಪಿ.ಪ್ರಸನ್ನಕುಮಾರ್, ಅ.ತಿ.ರಂಗನಾಥ್, ಮೂಗೂರು ನಂಜುಂಡಸ್ವಾಮಿ, ಕೆ.ಆರ್.ಕುಮಾರ್, ಶಿವರಾಮೇಗೌಡ, ಪ್ರವೀಣ್‍ಕುಮಾರ್ ಶೆಟ್ಟಿ, ಮಂಜುನಾಥ್ ದೇವ್, ಎಚ್.ವಿ.ಗಿರೀಶ್ ಗೌಡ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ