ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿ ಅಬ್ಬರಕ್ಕೆ ಅಡ್ಡಡ್ಡ ಮಲಗಿದ ಎನ್’ಎಸ್’ಯುಐ

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿ ಅಬ್ಬರಕ್ಕೆ ಅಡ್ಡಡ್ಡ ಮಲಗಿದ ಎನ್’ಎಸ್’ಯುಐ

ನವದೆಹಲಿ: ದೇಶದ ಗಮನ ಸೆಳೆದಿದ್ದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಆರ್’ಎಸ್’ಎಸ್ ಅಂಗಸಂಸ್ಥೆ ಎಬಿವಿಪಿ ಅಬ್ಬರಕ್ಕೆ ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ ಅಡ್ಡಡ್ಡ ಮಲಗಿದೆ.

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (ಡಿಯುಎಸ್‌ಯು) ಚುನಾವಣೆಯ 2019 ರ ಫಲಿತಾಂಶವನ್ನು ಇಂದು ಸಂಜೆ ಘೋಷಿಸಿದ್ದು, ಎಬಿವಿಪಿ ನಾಲ್ಕು ನಿರ್ಣಾಯಕ ಹುದ್ದೆಗಳಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಎನ್’ಎಸ್’ಯುಐ ಕೇವಲ ಒಂದು ಸ್ಥಾನವನ್ನು ಗಳಿಸಿದೆ.

ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಎಬಿವಿಪಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಕಾರ್ಯದರ್ಶಿ ಸ್ಥಾನವನ್ನು ಪಡೆದುಕೊಂಡಿದೆ.

ಎಬಿವಿಪಿ ಅಭ್ಯರ್ಥಿಗಳಾದ ಅಕ್ಷಿತ್ ದಹಿಯಾ, ಪ್ರದೀಪ್ ತನ್ವಾರ್ ಮತ್ತು ಶಿವಾಂಗಿ ಖರ್ವಾಲ್ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗೆ ಗರಿಷ್ಠ ಮತಗಳನ್ನು ಪಡೆದರು. ಎನ್’ಎಸ್’ಯುಐನಿಂದ ಏಕಾಂಗಿ ವಿಜೇತ ಆಕಾಶ್ ಚೌಧರಿ, ಡಿಯುಎಸ್‌ಯು ಕಾರ್ಯದರ್ಶಿ ಹುದ್ದೆಗೆ ಎದುರಾಳಿಯನ್ನು ಟ್ರಂಪ್ ಮಾಡುವಲ್ಲಿ ಯಶಸ್ವಿಯಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ