ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡ ಅವೈಜ್ಞಾನಿಕವಾಗಿದೆ-ವಾಟಾಳ್ ನಾಗರಾಜ್

 ಬೆಂಗಳೂರು, ಸೆ.7-ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ಇಂದು ಸಂಚಾರಿ ಪೋಲೀಸರ ವೇಷ ಧರಿಸಿ ನಗರದ ಹಲಸೂರು ಗೇಟ್ ಪೋಲೀಸ್ ಠಾಣೆ ಮುಂದೆ ವಿನೂತನವಾಗಿ ಪ್ರತಿಭಟನೆ ನಡೆಸಿ ದಂಡದ ಕ್ರಮವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ ಸಂಬಂಧ ವಿಧಿಸುತ್ತಿರುವ ದಂಡ ಯಮಪಾಶವಾಗಿದೆ. ಕಾಲಕ್ಕೆ ತಕ್ಕಂತೆ ಅಲ್ಪ ಪ್ರಮಾಣದಲ್ಲಿ ದಂಡವನ್ನು ಏರಿಕೆ ಮಾಡಿದರೆ ಯಾವುದೇ ವಿರೋಧವಿಲ್ಲ. ಆದರೆ ಒಂದಕ್ಕೆ ಹತ್ತರಷ್ಟು ದಂಡ ಏರಿಕೆ ಮಾಡಿ ಸರ್ವಾಧಿಕಾರಿ ಧೋರಣೆ ಮೆರೆದಿದ್ದಾರೆ.

ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಈ ನೀತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿವೆ. ನಮ್ಮ ರಾಜ್ಯದಲ್ಲಿ ಮಾತ್ರ ಈಗಾಗಲೇ ದಂಡದ ಮೂಲಕ ವಾಹನ ಚಾಲಕರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದುಕಿಗೋಸ್ಕರ ಆಟೋ, ದ್ವಿಚಕ್ರವಾಹನ, ಟ್ಯಾಕ್ಸಿ, ಟೆಂಪೋ, ಲಾರಿಗಳನ್ನು ಇಟ್ಟುಕೊಂಡಿರುತ್ತಾರೆ. ಸಣ್ಣಪುಟ್ಟ ತಪ್ಪುಗಳನ್ನು ಮಾಡಿದರೆ ಜೀವನಮಾನವಿಡೀ ತೊಂದರೆ ಅನುಭವಿಸುವಷ್ಟು ದಂಡ ವಿಧಿಸಿದರೆ ಅವರ ಭವಿಷ್ಯ ಏನಾಗಬೇಕು? ಅವರ ಕುಟುಂಬಗಳ ಗತಿಯೇನು? ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾದ ಅಗತ್ಯವಿದೆ ವಾಟಾಳ್ ಹೇಳಿದರು.

10 ಸಾವಿರ, 15ಸಾವಿರ ದಂಡ ವಿಧಿಸುವುದು ಎಷ್ಟು ಸಮಂಜಸ? ಅಷ್ಟು ಹಣವನ್ನು ತಿಂಗಳಲ್ಲಿ ದುಡಿಯಲು ಸಾಧ್ಯವಿಲ್ಲ. ಆದರೆ ಇಷ್ಟು ಹಣ ದಂಡ ಕಟ್ಟಬೇಕೆಂದರೆ ಹೇಗೆ?ಯಾವ ಮಾನದಂಡ ಇಟ್ಟುಕೊಂಡು ಈ ಕ್ರಮ ಜಾರಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ