![brave-military-operations-of-the-indian-army-that-will-make-your-heart-swell-with-pride-980x457-1453468481_1100x513](http://kannada.vartamitra.com/wp-content/uploads/2018/07/brave-military-operations-of-the-indian-army-that-will-make-your-heart-swell-with-pride-980x457-1453468481_1100x513-678x316.jpg)
ಶ್ರೀನಗರ, ಸೆ.7- ಆರ್ಟಿಕಲ್ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯ ಪುಂಡಾಟ ಮುಂದುವರೆದಿದೆ.
ಜಮ್ಮುವಿನ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ.
ಇಂದು 2.45ರ ನಸುಕಿನಲ್ಲಿ ಕೃಷ್ಣಘಾಟಿ ಪ್ರದೇಶದ ಮಿಲಿಟರಿ ಪೋಸ್ಟ್ ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರ ಮತ್ತು ಮಾರ್ಟಾರ್ಗಳಿಂದ ಅಪ್ರಚೋದಿತ ದಾಳಿ ನಡೆಸಿತು. ಇದಕ್ಕೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿ ಪ್ರತಿ ದಾಳಿ ನಡೆಸಿದರು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎರಡೂ ಕಡೆಗಳಿಂದ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ಸಾವು-ನೋವಿನ ವರದಿಯಾಗಿಲ್ಲ.