ಮಾಜಿ ರಾಷ್ಟ್ರಾಧ್ಯಕ್ಷ ರಾಬರ್ಟ್ ಮುಗಾಬೆ ನಿಧನ

ಹರಾರೆ, ಸೆ.6- ಜಿಂಬಾಬ್ವೆ ದೇಶವನ್ನು ಸುದೀರ್ಘಕಾಲ ಆಳಿದ್ದ ಮಾಜಿ ರಾಷ್ಟ್ರಾಧ್ಯಕ್ಷ ರಾಬರ್ಟ್ ಮುಗಾಬೆ ಇಂದು ಮುಂಜಾನೆ ನಿಧನರಾದರು.
ಕೆಲಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ 95ವರ್ಷ ವಯಸ್ಸಾಗಿತ್ತು.

ರಾಬರ್ಟ್ ಮುಗಾಬೆ ನಿಧನರಾದ ಸುದ್ದಿಯನ್ನು ಜಿಂಬಾಬ್ವೆ ಅಧ್ಯಕ್ಷ ಎಮರ್‍ಸನ್ ಮನನ್‍ಗಾಗ್ರಾ ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ. ಮುಗಾಬೆ ಸ್ವಾತಂತ್ರ್ಯ ಹೋರಾಟದ ಅಗ್ರನಾಯಕರಾಗಿದ್ದರೆಂದು ಬಣ್ಣಿಸಿದ್ದಾರೆ.

ಗೆರಿಲ್ಲಾ ಹೋರಾಟಗಾರರ ಮುಖ್ಯಸ್ಥರಾಗಿದ್ದ ಮುಗಾಬೆ 1980ರಲ್ಲಿ ಕ್ಷಿಪ್ರಕ್ರಾಂತಿ ಮೂಲಕ ಅಲ್ಪಸಂಖ್ಯಾತ ಶ್ವೇತವರ್ಣಿಯರ ಆಡಳಿತವನ್ನು ಕೆಳಗಿಳಿಸಿ ಅಧ್ಯಕ್ಷರಾದರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ಅಧ್ಯಕ್ಷರಾಗಿದ್ದ ಅವರನ್ನು 2017ರಲ್ಲಿ ಸೇನೆ ಕೆಳಗಿಳಿಸಿತು.

ಆರಂಭದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದ್ದ ಮುಗಾಬೆ ನಂತರದ ವರ್ಷಗಳಲ್ಲಿ ಆರ್ಥಿಕ ದುರಾಡಳಿತ ಮತ್ತು ಮಾನವಹಕ್ಕುಗಳ ಉಲ್ಲಂಘನೆ ವ್ಯಾಪಕ ಆರೋಪಗಳಿಗೆ ಗುರಿಯಾಗಿದ್ದರು.

ರಾಬರ್ಟ್ ಮುಗಾಬೆಯವರನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷದವರು ಮತ್ತು ಸೇನೆ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದವು. ಜಿಂಬಾಬ್ವೆ ರಾಜಕೀಯ ಇತಿಹಾಸದಲ್ಲಿ ಅತೀ ಹೆಚ್ಚು ಕಾಲ ಅಧ್ಯಕ್ಷರಾಗಿದ್ದ ಹೆಗ್ಗಳಿಕೆ ಇವರದ್ದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ