ಸಿಐಎಸ್‍ಎಫ್ ಅಧಿಕಾರಿಗಳಿಂದ ಮೂವರ ಬಂಧನ- ಒಂದು ಲಕ್ಷ ಮೈಕ್ರೋ ಎಸ್‍ಡಿ ಮೆಮೊರಿ ಚಿಪ್‍ಗಳನ್ನು ವಶ

ನವದೆಹಲಿ, ಸೆ.5-ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಅಧಿಕಾರಿಗಳು ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿ, 6 ಕೋಟಿ ರೂ. ಮೌಲ್ಯದ ಒಂದು ಲಕ್ಷ ಮೈಕ್ರೋ ಎಸ್‍ಡಿ ಮೆಮೊರಿ ಚಿಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಂಕಾಂಗ್‍ನಿಂದ ಭಾರತಕ್ಕೆ ವಿವಿಧ ಜಿಬಿ ಸಾಮಥ್ರ್ಯದ ಮೈಕ್ರೋ ಎಸ್‍ಡಿ ಮೆಮೊರಿ ಕಾರ್ಡ್‍ಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಅಭಿಷೇಕ್ ಭವನ್ ಭಾಯ್ ರಣಪ್ರಿಯಾ, ಭದ್ರೇಶ್ ದೇವ್‍ಚಂದ್ ರಣಪ್ರಿಯ ಮತ್ತು ಸುರೇಶ್ ಗುಲಾಬ್‍ಚಂದ್ ಜೈಸ್ವಾಲ್ ಎಂಬುವನನ್ನು ಬಂಧಿಸಲಾಗಿದೆ. ಇವರ ಲಗೇಜ್ ಬ್ಯಾಗ್‍ಗಳಲ್ಲಿ ಇವುಗಳನ್ನು ಅತ್ಯಂತ ಜಾಣ್ಮೆಯಿಂದ ಬಚ್ಚಿಡಲಾಗಿತ್ತು.

ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ಮೌಲ್ಯ 6 ಕೋಟಿ ರೂ.ಗಳು ಎಂದು ಸಿಐಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ