ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಣೆ

ನವದೆಹಲಿ, ಸೆ.5- ಇಂದು ಶಿಕ್ಷಕರ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸುವ ಮತ್ತು ಪುರಸ್ಕರಿಸುವ ಕಾರ್ಯಕ್ರಮಗಳು ನಡೆದಿವೆ.

ಇದೇ ವೇಳೆ ಜಗದ್ವಿಖ್ಯಾತ ಸರ್ಚ್ ಇಂಜಿನ್ ಗೂಗಲ್, ವಿಶೇಷ ಡೂಡಲ್ ಗೌರವದ ಮೂಲಕ ಶಿಕ್ಷಕರಿಗೆ ಗೌರವ ಸೂಚಿಸಿದೆ. ಈ ವಿನ್ಯಾಸದಲ್ಲಿ ಆಕ್ಟೋಪಸ್ (ಅಷ್ಟಪದಿ) ನನ್ನು ಶಿಕ್ಷಕರಾಗಿ ಬಿಂಬಿಸಲಾಗಿದೆ. ಒಂದೇ ಬಾರಿಗೆ ಹಲವು ಕಾರ್ಯಗಳನ್ನು ನಿರ್ವಹಿಸುವ ಶಿಕ್ಷಕರ ಹೊಣೆಗಾರಿಕೆಯನ್ನು ಈ ವಿಶಿಷ್ಟ ಜಲಚರಕ್ಕೆ ಹೋಲಿಸಲಾಗಿದೆ.

ಚಿತ್ರದಲ್ಲಿ ಆಕ್ಟೋಪಸ್‍ನ 8 ಕೈಗಳು ವಿವಿಧ ಕಾರ್ಯಗಳನ್ನು ನಿರ್ವಹಿಸುವಂತೆ ಬಿಂಬಿಸಲಾಗಿದೆ. ಗಣಿತದ ಸಮೀಕರಣ, ರಾಸಾಯನ ಶಾಸ್ತ್ರದ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವುದು, ಸಂಗೀತ, ಪತ್ರಿಕೆ ವಾಚನ ಮತ್ತು ಉತ್ತರ ಪತ್ರಿಕೆಗಳ ಪರಿಶೀಲನೆ ಹೀಗೆ ನಾನಾ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಪ್ರತಿಬಿಂಬಿಸಲಾಗಿದೆ.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ