ಶ್ರೀನಗರ,ಸೆ.4- ಜಮ್ಮುಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಕಾಶ್ಮೀರ ಕಣಿವೆಯಲ್ಲಿ ಕೇಬಲ್ ಟಿವಿ, ಅಂತರ್ಜಾಲ ಲಭ್ಯವಿಲ್ಲದ ಕಾರಣ ಡಿಟಿಎಚ್ ಡಿಶ್ ಟಿವಿ ಸಂಪರ್ಕ ಮತ್ತು ತೆರೆಮರೆಗೆ ಸರಿದಿದ್ದ ಟ್ರಾನಿಸ್ಟರ್ ರೇಡಿಯೋಗಳಿಗೆ ಈಗ ಭಾರೀ ಬೇಡಿಕೆ ಬಂದಿದೆ.
ಬಿಎಸ್‍ಎನ್‍ಎಲ್ ಲ್ಯಾಂಡ್‍ಲೈನ್ ಸಂಪರ್ಕಗಳು ಕೆಲವು ಭಾಗಗಳಲ್ಲಿ 20 ದಿನಗಳ ಮತ್ತೆ ಸಂಪರ್ಕ ಪಡೆದುಕೊಂಡಿದ್ದರೆ, ಮೊಬೈಲ್ ಪೋನ್ ಸಂಪರ್ಕ ಮತ್ತು ಇಂಟರ್ನೆಟ್ ಸೇವೆಗಳನ್ನು ಕಳೆದ 31 ದಿನಗಳಿಂದ ಸ್ಥಗಿತಗೊಂಡಿವೆ.
ಕೇಬಲ್ ಟಿವಿ ಆಪರೇಟರ್‍ಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರಿಂದ ಟಿವಿ ಚಾನೆಲ್‍ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ, ಕಾಶ್ಮೀರದಲ್ಲಿ ಡಿಟಿಎಚ್ ಡಿಶ್ ಟಿವಿ ಸಂಪರ್ಕಗಳ ಬೇಡಿಕೆ ಗಗನಕ್ಕೇರಿದೆ.
ಕಣಿವೆಯ ಅನೇಕ ಭಾಗಗಳಲ್ಲಿ ನಿರ್ಬಂಧವಿರುವುದರಿಂದ ದೇಶೀಯ ಮತ್ತು ವಿದೇಶಿ ಟಿವಿ ಚಾನೆಲ್‍ಗಳು ಜನರಿಗೆ ಸುದ್ದಿಯ ಪ್ರಾಥಮಿಕ ಮೂಲವಾಗಿ ಮಾರ್ಪಟ್ಟಿವೆ.
ನಾನು ಕಳೆದ 30 ದಿನಗಳಲ್ಲಿ ಶ್ರೀನಗರ ನಗರದ ಕೆಲವು ಭಾಗಗಳಲ್ಲಿ ಮೂರು ಡಜನ್ ಡಿಟಿಎಚ್ ಸಂಪರ್ಕಗಳನ್ನು ನೀಡಿದ್ದೇನೆ. ನಾಗರಿಕರ ಸಂಚಾರಕ್ಕೆ ಅಧಿಕಾರಿಗಳು ನಿರ್ಬಂಧಗಳ ಹೊರತಾಗಿಯೂ ಗ್ರಾಹಕರಿಂದ ಭಾರೀ ಬೇಡಿಕೆಗಳು ಬಂದಿವೆ ಎಂದು ಶ್ರೀನಗರದ ಡಿಶ್ ಟಿವಿ ಮಾರಾಟಗಾರ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಹೊಸ ಡಿಟಿಎಚ್ ಸಂಪರ್ಕಗಳನ್ನು ಸಕ್ರಿಯಗೊಳಿಸಲು ಇಂಟರ್ನೆಟ್ ಇಲ್ಲದ ಕಾರಣ, ಜನರು ಡಿಟಿಎಚ್ ಸೇವಾ ಪೂರೈಕೆದಾರರನ್ನು ಕರೆಯಲು ಮತ್ತು ಹೊಸ ಸಂಪರ್ಕಗಳನ್ನು ಸಕ್ರಿಯಗೊಳಿಸಲು ಲ್ಯಾಂಡ್‍ಲೈನ್ ಪೋನ್‍ಗಳನ್ನು ಬಳಸುತ್ತಾರೆ. ಅಸ್ತಿತ್ವದಲ್ಲಿರುವ ಡಿಶ್ ಟಿವಿ ಸಂಪರ್ಕಗಳನ್ನು ಸಹ ಈ ರೀತಿ ರೀಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಾವು ಈಗ ಬೇರೆ ಬೇರೆ ಟಿವಿ ಚಾನೆಲ್‍ಗಳಿಂದ ಪ್ರಸಾರವಾಗುವ ಸುದ್ದಿಗಳ ಮೇಲೆ ಅವಲಂಬಿತರಾಗಿದ್ದೇವೆ, ರಾಜ್ಯದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಅಸಾಧ್ಯವಾಗಿದೆ ಎಂದು ಉತ್ತರ ಕಾಶ್ಮೀರದ ಗ್ಯಾಂಡರ್‍ಬಾಲ್ ಜಿಲ್ಲೆಯಲ್ಲಿ ವಾಸಿಸುವ ಮಹಮ್ಮದ್ ಶಫಿ ಹೇಳಿದರು.