ಲಂಡನ್, ಸೆ.4- ಭಾರತದ ಸ್ವಾತಂತ್ರ್ಯೋತ್ಸವ ದಿನದಂದು ಲಂಡನ್ನ ಭಾರತೀಯ ಹೈ ಕಮಿಷನ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದ ಪಾಕಿಸ್ತಾನಿಯರು ನಿನ್ನೆ ಮತ್ತೆ ಪುಂಡಾಟ ನಡೆಸಿ ಕಾರ್ಯಾಲಯದ ಆವರಣಕ್ಕೆ ಹಾನಿಯುಂಟುಮಾಡಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದತಿ ನಂತರ ಪಾಕಿಸ್ತಾನಿಯರು ವಿವಿಧೆಡೆ ಪ್ರತಿಭಟನೆ ನಡೆಸಿ ಭಾರತದ ವಿರುದ್ಧ ವಿನಾಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ರಾಜಧಾನಿ ಲಂಡನ್ನಲ್ಲಿ ನಿನ್ನೆ ಪಾಕಿಸ್ತಾನಿಯರ ಗುಂಪೊಂದು ಪ್ರತಿಭಟನೆ ನಡೆಸಿ ಹೈಕಮಿಷನರ್ ಕಚೇರಿಯ ಕಿಟಕಿ ಗಾಜುಗಳಿಗೆ ಕಲ್ಲು ತೂರಿ ಹಾನಿಗೊಳಿಸಿದೆ. ಈ ಸಂಬಂಧ ಹೈಕಮಿಷನರ್ ಲಂಡನ್ ಮೇಯರ್ ಮತ್ತು ಬ್ರಿಟಿಷ್ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.
ಪಾಕಿಸ್ತಾನಿ ಪ್ರತಿಭಟನಾಕಾರರ ಉದ್ಧಟತನವನ್ನು ಲಂಡನ್ ಮೇಯರ್ ಸಿದ್ದಿಕಿ ಖಾನ್ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.