ಪೋನ್‌ನಲ್ಲಿ ಮಾತನಾಡಿದ್ದಕ್ಕೆ ಗರಂ, ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ

ಮೈಸೂರು: ಪಕ್ಷದ ಕಾರ್ಯಕರ್ತರೊಬ್ಬನಿಗೆ ಕ್ಯಾಮರಾ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕಪಳಮೋಕ್ಷ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆರಳಿದ ಸಿದ್ಧರಾಮಯ್ಯ ಏಕಾಏಕಿ ಕಾರ್ಯಕರ್ತನ ಕಪಾಳಕ್ಕೆ ಹೊಡೆದಿರುವುದು ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಬಳಿಕ ಈ ಕುರಿತಾಗಿ ಸಮಜಾಯಿಷಿ ನೀಡಿದ ಅವರು, ಪೋನಿನಲ್ಲಿ ಮಾತನಾಡುತ್ತಿರುವುದು ಕಿರಿಕಿರಿಯಾದ ಕಾರಣಕ್ಕಾಗಿ ಹೀಗೆ ಮಾಡಿದೆ ಎಂದು ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಸಿದ್ಧರಾಮಯ್ಯ ಗರಂ ಆಗಿ ಹಲ್ಲೆ ನಡೆಸಿರುವುದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ವರ್ತನೆ ಟೀಕೆಗೆ ಗುರಿಯಾಗಿದೆ.

ಈ ಹಿಂದೆ ಕೂಡಾ ಸಿದ್ದರಾಮಯ್ಯ ಪಕ್ಷದ ಕಾರ್ಯಕರ್ತರ ಮೇಲೆ ಕೋಪಗೊಂಡಿದ್ದ ಘಟನೆಗಳು ನಡೆದಿವೆ. ಮಗ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹಿಂದೊಮ್ಮೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸುತ್ತಿದ್ದ ವೇಳೆ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ಜಮಲಾರ್ ದೂರು ನೀಡುವ ವೇಳೆ ಮೇಜನ್ನು ಕುಟ್ಟಿದಕ್ಕಾಗಿ ಕೆಂಡಾಮಂಡಲಾದ ಸಿದ್ಧರಾಮಯ್ಯ ಮಹಿಳೆಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡಿದ್ದರು.

ಸಿದ್ಧರಾಮಯ್ಯ ಈ ನಡವಳಿಕೆ ವ್ಯಾಪಕ ಟೀಕೆ ಗುರಿಯಾಗಿತ್ತು, ಬಳಿಕ ತನ್ನ ವರ್ತನೆಗೆ ಅವರು ಕ್ಷಮೆ ಕೋರಿದ್ದರು. ಆದರೆ ಈ ಬಾರಿ ತನ್ನ ವರ್ತನೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ