ಬೆಂಗಳೂರು, ಸೆ.3-ಆರ್ಥಿಕವಾಗಿ ದೇಶ ಅಧೋಗತಿಗೆ ತಲುಪಿದೆ.ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳನ್ನು ಸುತ್ತುವುದು ಬಿಟ್ಟು, ದೇಶದ ಆರ್ಥಿಕತೆ ಸರಿಪಡಿಸಬೇಕೆಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ತಜ್ಞರು, ಮಹಾಜ್ಞಾನಿಗಳಾದ ಮನ್ಮೋಹನ್ಸಿಂಗ್ 10 ವರ್ಷ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕತೆ ಸದೃಢವಾಗಿತ್ತು. ಪ್ರಸ್ತುತ ಆರ್ಥಿಕತೆ ಅಧೋಗತಿಗೆ ತಲುಪಿದೆ. ಕೈಗಾರಿಕೆಗಳು ಮುಚ್ಚಿಹೋಗುತ್ತಿವೆ. ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಪ್ರಧಾನಿಯವರು ವಿದೇಶ ಸುತ್ತುತ್ತಿದ್ದಾರೆ. ಕೇವಲ ಭಾವನಾತ್ಮಕ ವಿಷಯಗಳಿಂದ ದೇಶವನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಸಿಬಿಐ, ಇಡಿ, ಐಟಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ವಿಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಬಿಜೆಪಿ ಪಕ್ಷದವರೇನು ಬಿಪಿಎಲ್ ಕಾರ್ಡುದಾರರೇ?ವೃದ್ಧಾಪ್ಯಪಿಂಚಣಿ ತೆಗೆದುಕೊಳ್ಳುತ್ತಿರುವವರೇ ಎಂದು ರೇವಣ್ಣ ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಅವರು ಎಲ್ಲೂ ಓಡಿ ಹೋಗುವುದಿಲ್ಲ. ಆದರೆ ಜನನಾಯಕನ ವಿರುದ್ಧ ವಿಪಕ್ಷ ನಾಯಕರು ಮಾತನಾಡಿರುವುದು ಅತ್ಯಂತ ವಿಷಾದನೀಯ ಎಂದು ಹೇಳಿದರು.