ಇನ್‍ಫೆÇೀಸಿಸ್ ಪ್ರತಿಷ್ಟಾನದ ವತಿಯಿಂದ 200 ಮನೆಗಳನ್ನು ನಿರ್ಮಿಸಿ ಕೊಡಲು ನಿರ್ಧಾರ

ಬೆಂಗಳೂರು,ಆ.31-ಉತ್ತರ ಕರ್ನಾಟಕ ಭಾಗದ ಕೊಣ್ಣೂರು ಮತ್ತಿತರೆಡೆ ಇನ್‍ಫೆÇೀಸಿಸ್ ಪ್ರತಿಷ್ಟಾನದ ವತಿಯಿಂದ 200 ಮನೆಗಳನ್ನು ನಿರ್ಮಿಸಿ ಕೊಡಲು ನಿರ್ಧರಿಸಲಾಗಿದೆ.

ಅಗತ್ಯ ಆಹಾರ ಸಾಮಗ್ರಿಗಳು ನೀಡುವುದರ ಜೊತೆಗೆ ಮನೆಗಳನ್ನು ಕಟ್ಟಿಕೊಡಲು ನಿರ್ಧರಿಸಿದ್ದು ಮಾನವೀಯತೆ ಮೆರೆದಿದ್ದಾರೆ.
ಇನ್‍ಫೆÇೀಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಅವರು, ನಿನ್ನೆ ಕೊಣ್ಣೂರು ಗಂಜಿಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ತಂಗಿದ್ದ ನಿರಾಶ್ರಿತರನ್ನು ಸಮಾಧಾನಪಡಿಸಿದರು.ಗಂಜಿಕೇಂದ್ರದಲ್ಲಿ ಉಪಹಾರ, ಊಟದ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲ ಮೂಲಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.

ಈ ಭಾಗದಲ್ಲಿ ಹೊಳೆ ದಂಡೆಯಲ್ಲಿ ಮನೆ ಕಟ್ಟಿದರೆ ಮತ್ತೆ ಆತಂಕ ಎದುರಾಗುತ್ತದೆ.ಆದ್ದರಿಂದ ಎತ್ತರ ಭಾಗದಲ್ಲಿ ಮನೆ ಕಟ್ಟಿಕೊಡಿ ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.ಸರ್ಕಾರ ಜಾಗ ತೋರಿಸಿ, ಎಷ್ಟು ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲು ಹೇಳಿದರೆ ನಾವು ಅದರಂತೆ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಸಧ್ಯಕ್ಕೆ ಈ ಭಾಗದಲ್ಲಿ 200 ಮನೆಗಳನ್ನು ಕಟ್ಟಿಕೊಡಲು ನಿರ್ಧರಿಸಿದ್ದೇನೆ. ಒಂದು ಕಡೆ 50 ಮತ್ತೊಂದು ಕಡೆ 50 ಹೀಗೆ 200 ಮನೆಗಳನ್ನು ಕಟ್ಟಿಕೊಡುತ್ತೇವೆ. ಮೊದಲು ಸರ್ಕಾರ ಜಾಗ ತೋರಿಸಿ ಪ್ಲಾನ್ ಹೇಳಿದರೆ ಸಾಕು. ನಾವು ತಕ್ಷಣ ಕಾರ್ಯಪ್ರವೃತರಾಗುತ್ತೇವೆ. ನಮ್ಮ ಪ್ರತಿಷ್ಟಾನದ ಗುತ್ತಿಗೆದಾರರಾದ ರಮೇಶ್ ಅವರು, ಇಲ್ಲೇ ಇದ್ದಾರೆ ಅವರಿಗೆ ಹೇಳಿ ಒಂದು ಅಥವಾ ಎರಡು ಬೆಡ್ ರೂಮ್‍ಗಳ ಮನೆ ನಿರ್ಮಿಸಿಕೊಡುತ್ತೇವೆ ಎಂದು ತಿಳಿಸಿದರು.

2009ರಲ್ಲಿ ಗುಲ್ಬರ್ಗಾ, ಯಾದಗಿರಿ, ಸೇಡಂ ಭಾಗದಲ್ಲಿ ನೆರೆಯುಂಟಾಗಿತ್ತು. ಆಗ ನಾವು 30ಕೋಟಿ ರೂ.ವೆಚ್ಚದಲ್ಲಿ 2384ಮನೆ ನಿರ್ಮಿಸಿಕೊಟ್ಟಿದ್ದೆವು. ಕಳೆದ ವರ್ಷ ಕೂರ್ಗ್‍ನಲ್ಲಿ ಉಂಟಾದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 200 ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದೇವೆ. ವಿಜಯವಾಡದಲ್ಲಿ ಪ್ರವಾಹ ಬಂದಿದ್ದಾಗ ಅಲ್ಲಿನ ಮೀನುಗಾರರಿಗೆ 300 ಮನೆಗಳನ್ನು ಕಟ್ಟಿಕೊಟ್ಟೆವು. ಹಾಗಾಗಿ ಪ್ರವಾಹ ಬಂದಾಗ ಹೇಗೆ, ಎಂತಹ ಕಟ್ಟಿಕೊಡಬೇಕೆಂಬುದು ನಮಗೆ ಗೊತ್ತಿದೆ ಎಂದು ಸುಧಾಮೂರ್ತಿ ಸ್ಪಷ್ಟಪಡಿಸಿದರು.
ಸುಧಾಮೂರ್ತಿ ಅವರ ಉದಾರತೆಗೆ ಅಲ್ಲಿನ ಜನರು ಇವರೇ ನಿಜವಾದ ಕರ್ನಾಟಕದ ಮಾತೆ ಎಂದು ಕೊಂಡಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ