ಬೆಂಗಳೂರು, ಆ.28-ಖಾತೆಗಳ ಹಂಚಿಕೆ ನಂತರ ಬಿಜೆಪಿಯಲ್ಲಿ ಉಂಟಾಗಿದ್ದ ಅಸಮಾಧಾನ ಸದ್ಯಕ್ಕೆ ತಾತ್ಕಾಲಿಕವಾಗಿ ಶಮನವಾದಂತೆ ಕಂಡುಬಂದರೂ ಬೆಳಗಾವಿ ಭಿನ್ನಮತ ಬೂದಿಮುಚ್ಚಿದ ಕೆಂಡಂತಿದೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಆಕ್ರೋಶಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದೂ ಅಲ್ಲದೆ ಉಪಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಅವರ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಮಾಜಿ ಶಾಸಕ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ರೋಶಗೊಂಡಿದ್ದ ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಸಿಎಂ ಬಿ.ಎಸï.ಯಡಿಯೂರಪ್ಪನವರ ಎದುರಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು.ಇದೀಗ ಸವದಿಗೆ ಡಿಸಿಎಂ ಹುದ್ದೆಯನ್ನೂ ನೀಡಿರುವುದಕ್ಕೆ ಮತ್ತಷ್ಟು ಆಕ್ರೋಶಗೊಂಡಿದ್ದು, ಬಿಜೆಪಿ ನಾಯಕರಿಂದ ದೂರ ಉಳಿದಿದ್ದಾರೆ.ಸಿಎಂ ಯಡಿಯೂರಪ್ಪರನ್ನು ಭೇಟಿಯೂ ಮಾಡದ ಉಮೇಶ್ ಕತ್ತಿ ನಿನ್ನೆ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪದಗ್ರಹಣ ಸಮಾರಂಭಕ್ಕೂ ಗೈರಾಗಿದ್ದರು.
ನಾಲ್ಕೈದು ದಿನಗಳಿಂದ ಯಾವ ಬಿಜೆಪಿ ನಾಯಕರ ಸಂಪರ್ಕಕ್ಕೂ ಸಿಗದೆ ದೂರ ಉಳಿದ ಉಮೇಶ್ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತನಾಡಿದ್ದು ಬಿಜೆಪಿ ನಾಯಕರಿಗೆ ಆತಂಕ ಮೂಡಿಸಿತ್ತು.
ಹೀಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ಶಮನ ಮಾಡುವ ಪ್ರಯತ್ನದಲ್ಲಿದ್ದು, ಉಮೇಶ್ ಕತ್ತಿ ಅವರನ್ನು ಸಂಪರ್ಕಿಸಿ ಮನವೊಲಿಸೋ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಕತ್ತಿ ಮನವೊಲಿಸೋ ಪ್ರಯತ್ನ ಮಾಡಿ ವಿಫಲವಾಗಿರುವ ಸಿಎಂ ಯಡಿಯೂರಪ್ಪ ಇನ್ನೂ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆ ಪ್ರಕಟವಾದ ನಂತರವೂ ಉಮೇಶ್ ಕತ್ತಿ ಸಂಪರ್ಕಕ್ಕೆ ಪ್ರಯತ್ನಿಸಿದ್ದ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ಭರವಸೆ ನೀಡುತ್ತಿದ್ದಾರೆ.ಈ ಮೂಲಕ ಉಮೇಶ್ ಕತ್ತಿಯ ಮನವೊಲಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.
ಆದರೂ ಯಡಿಯೂರಪ್ಪನವರ ಮನವೊಲಿಕೆಗೆ ಬಗ್ಗದ ಉಮೇಶ್ ಕತ್ತಿ ನಡೆಯಿಂದ ಸಿಎಂ ಯಡಿಯೂರಪ್ಪ ಆತಂಕಕ್ಕೊಳಗಾಗಿದ್ದಾರೆ. ಹೈಕಮಾಂಡ್ ತೀರ್ಮಾನದಿಂದ ರಾಜ್ಯದ ಬಿಜೆಪಿ ನಾಯಕರ ಅಸಮಾಧಾನಕ್ಕೆ ಸಿಎಂ ಯಡಿಯೂರಪ್ಪ ಗುರಿಯಾಗಿದ್ದಾರೆ. ದ್ದಾರೆ.
ನಾಲ್ಕೈದು ದಿನಗಳಿಂದ ಯಾವ ಬಿಜೆಪಿ ನಾಯಕರ ಸಂಪರ್ಕಕ್ಕೂ ಸಿಗದೆ ದೂರ ಉಳಿದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತನಾಡಿದ್ದು ಬಿಜೆಪಿ ನಾಯಕರಿಗೆ ಆತಂಕ ಮೂಡಿಸಿತ್ತು.