ಬೆಂಗಳೂರು, ಆ.28- ಬಿಜೆಪಿ ಸರ್ಕಾರದ ಅವಧಿಯಲ್ಲೂ ಟೆಲಿಫೆÇೀನ್ ಕದ್ದಾಲಿಕೆ ಆಗುತ್ತಿವೆ ಎಂದು ಆರೋಪಿಸಿರುವ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ಬಾಬು 2008ರ ಜನವರಿ 1ರಿಂದ ಇಲ್ಲಿವರೆಗೆ ನಡೆದಿರುವ ಟೆಲಿಫೆÇೀನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ರಾಜ್ಯದ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸುವಂತೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಿಂದ ಹಿಡಿದು ಇಲ್ಲಿಯವರೆಗೆ ಆಗಿರುವ ಟೆಲಿಫೆÇೀನ್ ಕದ್ದಾಲಿಕೆ ಪ್ರಕರಣಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.
ಜೆಡಿಎಸ್ ಹಾಗೂ ಪ್ರತಿಪಕ್ಷ ನಾಯಕರ ಫೆÇೀನ್ ಕದ್ದಾಲಿಕೆ ಮಾಡಲಾಗುತ್ತಿದೆ.ಇಂಟಲಿಜನ್ಸ್ ನ್ನು ದುರುಪಯೋಗೊಳಿಸಿಕೊಳ್ಳಲಾಗುತ್ತಿದೆ ಎಂದು ದೂರಿದವರು.ನನಗೂ ಕೂಡ ಅನಾಮಿಕರೊಬ್ಬರು ಪತ್ರಕರ್ತರ ಹೆಸರಿನಲ್ಲಿ ಕರೆ ಮಾಡಿ ಸಿದ್ದರಾಮಯ್ಯ ಅವರ ಬಗ್ಗೆ ದೇವೇಗೌಡರ ಅಭಿಪ್ರಾಯವೇನು ಎಂದು ಕೇಳಿದ್ದರು.ಆಗ ನಾನು ಅವರನ್ನೇ ಕೇಳಿ ಎಂದು ಹೇಳಿದ್ದೆ, ನಂತರ ಅನುಮಾನಗೊಂಡು ಟೆಲಿಫೆÇೀನ್ ನಂಬರ್ ಚೆಕ್ ಮಾಡಿದಾಗ ಇಂಟಲಿಜನ್ಸ್ನವರೆಂದು ತಿಳಿದು ಬಂತು.ಪ್ರತಿಪಕ್ಷವನ್ನು ಮಣಿಸಲು ಸರ್ಕಾರ ಇಂಟಲಿಜನ್ಸ್ನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ನಾವು ದೂರು ದಾಖಲಿಸಿ, ತನಿಖೆಗೂ ಒತ್ತಾಯಿಸಿದ್ದೇವೆ ಫೆÇೀನ್ ಕದ್ದಾಲಿಕೆ ಆರೋಪ ಪ್ರಕರಣವನ್ನು ಸಿಬಿಐ ಬದಲಾಗಿ ಎಸ್ಐಟಿಗೆ ವಹಿಸಬೇಕು ಎಂದ ಅವರು, ಈ ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪಾ ಅವಧಿಯಲ್ಲಿ ಫೆÇೀನ್ ಕದ್ದಾಲಿಕೆ ಆರೋಪ ಕೇಳಿ ಬಂದಿದ್ದಾಗ ಅಂದಿನ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದ ಬಿಎಸ್ವೈ ಅಂದು ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು.
ಅಲ್ಲದೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಸಹ ಫೆÇೀನ್ ಕದ್ದಾಲಿಕೆ ಬಗ್ಗೆ ಆರೋಪ ಮಾಡಿದ್ದರು.ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಬಿಎಸ್ವೈನ್ನು ಒತ್ತಾಯಿಸಲಾಗಿತ್ತು.ಹೀಗಾಗಿ ಸಿಎಂಗೆ ಪತ್ರ ಬರೆದು ಈ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಪತ್ರ ಬರೆದಿದ್ದೇನೆ.
ಕಳೆದ 2018 ಆಗಸ್ಟ್ 1ರಿಂದ 2019 ಆಗಸ್ಟ್ 19ರವರೆಗೆ ಆಗಿರಬಹುದಾದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ.ಅದನ್ನು ರಾಜ್ಯದ ಎಸ್ಐಟಿಗೆ ವಹಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಕೋನರೆಡ್ಡಿ ಉಪಸ್ಥಿತರಿದ್ದರು.