ಮತ್ತೊಂದು ಯಶಸ್ವಿ ಪಥದತ್ತ ಸಾಗಿದ ಚಂದ್ರಯಾನ-2

ಬೆಂಗಳೂರು, ಆ.28- ಚಂದಿರನ ಮೇಲೆ ಚಂದ್ರಯಾನ-2 ನೌಕೆ ಪಾದಾರ್ಪಣೆ ಮಾಡಲು ಇನ್ನೂ 11 ದಿನಗಳು ಬಾಕಿ ಉಳಿದಿದ್ದು, ನಿರೀಕ್ಷೆಯಂತೆ ಇಂದು ಬೆಳಗ್ಗೆ ಶಶಾಂಕನ ಮೂರನೇ ಕಕ್ಷೆಗೇರುವಲ್ಲಿ ಗಗನ ನೌಕೆ ಯಶಸ್ವಿಯಾಗಿದೆ.

ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-2 ಮತ್ತೊಂದು ಯಶಸ್ವಿ ಪಥದತ್ತ ಸಾಗಿದೆ.
ಚಂದ್ರಯಾನ-2 ನೌಕೆ ನಿರೀಕ್ಷೆಯಂತೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.ಇಂದು ಬೆಳಗ್ಗೆ 9.04ಕ್ಕೆ ಸರಿಯಾಗಿ ನೌಕೆ ಎರಡನೇ ಕಕ್ಷೆಯಿಂದ ಮೂರನೇ ಕಕ್ಷೆಗೆ ಯಶಸ್ವಿಯಾಗಿ ಸ್ಥಳಾಂತರಗೊಂಡಿತು ಎಂದು ಇಸ್ರೋ ಕೇಂದ್ರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಕ್ಷೆ ಬದಲಾವಣೆ ಕಾರ್ಯಾಚರಣೆಗೆ 1,119ಸೆಕೆಂಡ್‍ಗಳು ಬೇಕಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ.
ಆ.30ರಂದು ಚಂದ್ರಯಾನ-2 ಗಗನ ನೌಕೆ ಮುಂದಿನ ಹಂತದ ಕಕ್ಷೆ ಅಂದರೆ ಊಟ್ಠ್ಟಠಿe u್ಟಚಿಜಿಠಿಗೆ ಪ್ರವೇಶಿಸಲಿದೆ.ಆ.20ರಂದು ಈ ನೌಕೆ ಯಶಸ್ವಿಯಾಗಿ ಮೊದಲನೇ ಕಕ್ಷೆಯಿಂದ ಎರಡನೇ ಕಕ್ಷೆಗೆ ಸ್ಥಳಾಂತರಗೊಂಡು ಯಶಸ್ವಿಯಾಗಿ ಮುನ್ನಡೆ ಸಾಧಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ