ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ

ಬೆಂಗಳೂರು, ಆ.28-ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ಮೇಲೆ ಬೆಳ್ಳಂಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದಿದ್ದಾರೆ.
ಯಲಹಂಕ, ಕೊಡಿಗೇಹಳ್ಳಿಯಲ್ಲಿರುವ ಬ್ರಿಗೇಡ್‍ಒಪಸ್ ಮತ್ತು ಏರ್‍ಪೆÇೀರ್ಟ್ ರಸ್ತೆಯಲ್ಲಿರುವ ಸಲಾರ್‍ಪುರಿಯ ಸತ್ವಗಲೇರಿಯ ಕಟ್ಟಡಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.

ಬಿಬಿಎಂಪಿಗೆ ಹೊಸ ಆಯುಕ್ತರು ಬರುತ್ತಿದ್ದಂತೆ ಪಾಲಿಕೆ ಆಡಳಿತ ಇನ್ನಷ್ಟು ಚುರುಕುಗೊಂಡಿದೆ.
ಅನಿಲ್‍ಕುಮಾರ್‍ಅವರು ಇಂದು ಅಧಿಕಾರ ವಹಿಸಿಕೊಂಡಿದ್ದು, ಎಚ್ಚೆತ್ತುಕೊಂಡ ಅಧಿಕಾರಿಗಳು ತೆರಿಗೆ ಬಾಕಿ ಉಳಿಸಿರುವವರ ವಿರುದ್ಧ ತಮ್ಮ ಚಿತ್ತ ಹರಿಸಿದ್ದಾರೆ.
ಹಾಗಾಗಿಯೇ ಇಂದು ಒಂದೆರಡು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಹಲವು ಬಾರಿ ನೋಟೀಸ್ ಕೊಟ್ಟರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದೆ. ಬ್ರಿಗೇಡ್‍ಒಪಸ್ ಮಾಲೀಕರು 6.21 ಕೋಟಿ ರೂ.ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಎರಡು ವರ್ಷಗಳಿಂದ ತೆರಿಗೆ ಕಟ್ಟಿಲ್ಲ.

ಬಾಕಿ ಇರುವ ತೆರಿಗೆ ಪಾವತಿಸುವಂತೆ ಕೊನೆಯ ನೋಟೀಸ್‍ನ್ನು ಕಟ್ಟಡಕ್ಕೆ ಅಂಟಿಸಿ ಪಾಲಿಕೆ ಅಧಿಕಾರಿಗಳು ಬ್ರಿಗೇಡ್ ಒಪಸ್ ಕಟ್ಟಡಕ್ಕೆ ಬೀಗ ಹಾಕಿದರು.
ಸಲಾರ್‍ಪುರಿಯ ಕಟ್ಟಡದ ಮಾಲೀಕರು 1.12 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಎರಡೂ ಕಟ್ಟಡಗಳ ಮಾಲೀಕರು ತಕ್ಷಣ ಬಾಕಿ ಇರುವ ತೆರಿಗೆಯನ್ನು ಪಾವತಿಸುವಂತೆ ಅಧಿಕಾರಿಗಳು ಸೂಚಿಸಿದ್ದು, ಇದಕ್ಕೆ ತಪ್ಪಿದರೆ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಎಂಟಿಸಿ ಡಿಪೆÇೀ ಮೇಲೂ ದಾಳಿ: ಬಿಎಂಟಿಸಿ 28ನೆ ಡಿಪೆÇೀ ಮೇಲೂ ಪಾಲಿಕೆ ಅಧಿಕಾರಿಗಳು ಇಂದು ದಾಳಿ ನಡೆಸಿದರು.
28ನೆ ಡಿಪೆÇೀದಿಂದ 12 ಲಕ್ಷ ರೂ.ತೆರಿಗೆ ಬಾಕಿ ಉಳಿಸಿಕೊಂಡಿದ್ದು, ನಾಲ್ಕು ವರ್ಷಗಳಿಂದ ತೆರಿಗೆ ಕಟ್ಟಿಲ್ಲ. ದಾಳಿ ವೇಳೆ ಡಿಪೆÇೀ ಮ್ಯಾನೇಜರ್ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರ ತೆರಿಗೆ ಕಟ್ಟುವಂತೆ ನೋಡಿಕೊಳ್ಳುವುದಾಗಿಯೂ, ಈ ಡಿಪೆÇೀವನ್ನು ಸೀಜ್ ಮಾಡದಂತೆ ಮನವಿ ಮಾಡಿದರು. ಹಾಗಾಗಿ 28ನೆ ಡಿಪೆÇೀಗೆ ಅಧಿಕಾರಿಗಳು ಬೀಗ ಜಡಿಯಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ