ಉಧಾಂಪುರ, ಆ.27- ಜಮ್ಮು ಕಾಶ್ಮೀರದ ಪರ್ವತಮಯ ಪ್ರದೇಶಗಳಲ್ಲಿ ವಾಹನಗಳು ಕಂದಕ್ಕೆ ಉರುಳಿ ಬೀಳುತ್ತಿರುವ ದುರ್ಘಟನೆಗಳು ಮುಂದುವರೆದಿದ್ದು, ಇಂದು ಬೆಳಗ್ಗೆ ಉಧಾಂಪುರ ಜಿಲ್ಲೆಯಲ್ಲಿ ಮಿನಿಬಸ್ ಕಮರಿಗೆ ಉರುಳಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ. ಉಧಾಂಪುರ ಜಿಲ್ಲೆಯ ರಾಮನಗರ ತಹ್ಸೀಲ್ನ ತಿರುವಿನಲ್ಲಿ ಕಿಕ್ಕೀರಿದು ತುಂಬಿದ್ದ ಮಿನಿಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿತ್ತು.
ಈ ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆಯಷ್ಟೆ ಇದೇ ಉಧಾಂಪುರ ಜಿಲ್ಲೆಗೆ ಸಮೀಪ ಬಸ್ವೊಂದು ಉರುಳಿ ಬಿದ್ದು 30ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದರು.