ಬೆಂಗಳೂರು, ಆ.27- ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಾಳೆ ಸಭೆ ನಡೆಸುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ನಾವು ಸಹಕಾರ ರಂಗದಿಂದ ಬಂದಿದ್ದು, ಸಾರಿಗೆ ಇಲಾಖೆ ಹೊಸತಾಗಿರುವುದರಿಂದ ಬುಧವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.ಇಲಾಖೆಯ ಉದ್ದ, ಅಗಲ, ಆಳ ಎಲ್ಲವನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದಂತೆ ನನ್ನದೇ ಆದ ಚಿಂತನೆಗಳಿವೆ. ಆ ಚಿಂತನೆಗಳನ್ನು ವಾಸ್ತವಕ್ಕೆ ಇಳಿಸುವ ಮೊದಲು ಸಾರಿಗೆ ಇಲಾಖೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.ಆ ಕೆಲಸವನ್ನು ಮೊದಲು ಮಾಡುತ್ತೇನೆ ಎಂದರು.