ಬೆಂಗಳೂರು, ಆ.27- ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ.
2019ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗಿರುವ ದಂಡದ ಪ್ರಮಾಣವನ್ನು ಭಾರೀ ಪ್ರಮಾಣದಲ್ಲ ಪರಿಷ್ಕರಿಸಲಾಗಿದೆ.
ಸೆಪ್ಟೆಂಬರ್ 1ರಿಂದ ಪರಿಷ್ಕøತ ದಂಡದ ಪ್ರಮಾಣ ಅನುಷ್ಠಾನಕ್ಕೆ ಬರಲಿದೆ.ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ತಂದು ವಿವಿಧ ಸಂಚಾರಿ ನಿಯಮಗಳಿಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.
ಸಾಮಾನ್ಯ ಅಪರಾಧಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 100 ನಿಂದ 500ರೂ.ಗೆ ಹೆಚ್ಚಿಸಲಾಗಿದೆ.ಪರವಾನಗಿ ಇಲ್ಲದೆ ಅನಧಿಕೃತ ವಾಹನಗಳಿಗೆ 1000 ದಿಂದ 5000ರೂ.ವರೆಗೆ ಪರಿಷ್ಕರಿಸಲಾಗಿದೆ.
ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಪ್ರಮಾಣವನ್ನು 500 ರಿಂದ 5000ರೂ.ಗೆ ಹೆಚ್ಚಿಸಲಾಗಿದೆ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಕ್ಕೆ ವಿಧಿಸಲಾಗುತ್ತಿದ್ದ ದಂಡವನ್ನು 2000 ದಿಂದ 10,000ರೂ.ಗೆ ಹೆಚ್ಚಿಸಲಾಗಿದೆ.ಅತೀ ವೇಗದ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 400 ರಿಂದ 1000ರೂ.ಗೆ ಪರಿಷ್ಕರಿಸಲಾಗಿದೆ.
ಪರವಾನಗಿ ಇಲ್ಲದ ವಾಹನಕ್ಕೆ ವಿಧಿಸಲಾಗುತ್ತಿದ್ದ ದಂಡವನ್ನು 5000 ದಿಂದ 10,000ಕ್ಕೆ ಹೆಚ್ಚಿಸಲಾಗಿದ್ದು, ಅರ್ಹತೆ ಇಲ್ಲದವರು ವಾಹನ ಚಾಲನೆ ಮಾಡಿದರೆ ವಿಧಿಸಲಾಗುತ್ತಿದ್ದ ದಂಡವನ್ನು 500 ರಿಂದ 10,000ರೂ.ಗೆ ಹೆಚ್ಚಳ ಮಾಡಲಾಗಿದೆ.
ಸೀಟ್ಬೆಲ್ಟ್ ಧರಿಸದೆ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಪ್ರಮಾಣ 100 ರಿಂದ 1000ರೂ.ಗೆ ಹೆಚ್ಚಿಸಲಾಗಿದೆ. ಆ್ಯಂಬುಲೆನ್ಸ್ನಂತಹ ತುರ್ತು ವಾಹನಗಳಿಗೆ ಅವಕಾಶ ಮಾಡಿಕೊಡದಿದ್ದರೆ 10,000ರೂ., ಟಿಕೆಟ್ ರಹಿತ ಪ್ರಯಾಣಕ್ಕೆ 500ರೂ. ದಂಡ ವಿಧಿಸಲಾಗಿದೆ.
ವಿಮೆ ಇಲ್ಲದೆ ಚಾಲನೆ ಮಾಡುವ ವಾಹನಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ದಿಂದ 2000ರೂ.ಗೆ ಹಾಗೂ ಅಪಾಯಕಾರಿ ವಾಹನ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ದಿಂದ 5000ರೂ.ಗೆ ಹೆಚ್ಚಿಸಲಾಗಿದೆ.
ಅತಿ ಭಾರದ ಸರಕು ಸಾಗಣೆ ಮಾಡಿದರೆ 20,000ರೂ.ವರೆಗೂ ದಂಡ ವಿಧಿಸುವುದಲ್ಲದೆ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ ಪ್ರತೀ ಪ್ರಯಾಣಿಕರಿಗೆ 1000ರೂ., ಹಾಗೆಯೇ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ 1000 ದಿಂದ 5000ರೂ. ವರೆಗೆ ದಂಡ ವಿಧಿಸಲಾಗುತ್ತದೆ.
ಅಪ್ರಾಪ್ತರು ವಾಹನ ಚಾಲನೆ ಮಾಡಿ ಎಸಗುವ ಅಪರಾಧಕ್ಕೆ 25,000ರೂ.ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಬೆಂಗಳೂರು, ಆ.27-ಕ್ಲೀನ್ ಟು ಗ್ರೀನ್ ಅಭಿಯಾನದ ಎರಡನೇ ಸರಣಿಯನ್ನು ರಿವರ್ಸ್ ಲಾಜಿಸ್ಟಿಕ್ ಸಲ್ಯೂಷನ್ಸ್ನ ಆರ್ಎಲ್ಜಿ ತಂಡ ಭಾರತದಲ್ಲಿ ಆರಂಭಿಸಿದೆ.
ಎಲೆಕ್ಟ್ರಾನಿಕ್ ಉತ್ಪನ್ನಗಳ ಜವಾಬ್ದಾರಿಯುತ ವಿಲೇವಾರಿ ಮತ್ತು ಅವುಗಳ ಪುನರ್ಬಳಕೆ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದ್ದು, ವಿಶ್ವದಲ್ಲಿ ಇ-ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ ನಾಲ್ಕನೇ ದೊಡ್ಡದೇಶವಾಗಿದೆ. ಪ್ರತಿ ವರ್ಷ ಎರಡು ದಶಲಕ್ಷಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಕೇವಲ 0.036 ದಶಲಕ್ಷ ಟನ್ ತ್ಯಾಜ್ಯವನ್ನು ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ಶೇ.95ರಷ್ಟು ಇ-ತ್ಯಾಜ್ಯವನ್ನು ಭಾರತದಲ್ಲಿ ಪುನರ್ಬಳಕೆ ಮಾಡಲಾಗುತ್ತಿದೆ.
2018-19ನೆ ಸಾಲಿನಲ್ಲಿ ಆರ್ಎಲ್ಜಿ ಗ್ರೂಪ್ನಿಂದ ಕೈಗೊಂಡಿದ್ದ ಅಭಿಯಾನ ಯಶಸ್ವಿಯಾಗಿದ್ದು, ಭಾರತದ 26 ನಗರಗಳಲ್ಲಿ ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 825 ಕಾರ್ಯಕ್ರಮಗಳನ್ನು ನಡೆಸಿ 10,02,802 ಮಂದಿಗೆ ಜಾಗೃತಿ ಮೂಡಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೈಗೊಳ್ಳಲಾಗುತ್ತಿರುವ ಅಭಿಯಾನವನ್ನು ಮತ್ತಷ್ಟು ಉತ್ತಮ ಮಟ್ಟದಲ್ಲಿ ನಡೆಸಲು ಚಿಂತನೆ ನಡೆಸಿದ್ದು, 27 ರಾಜ್ಯಗಳು, 5 ಕೇಂದ್ರಾಡಳಿತ ಪ್ರದೇಶಗಳು, 38 ನಗರಗಳ 1245 ಶಾಲೆಗಳು, 56 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು 10 ಕಚೇರಿ ಕ್ಲಸ್ಟರ್ಗಳು, 33 ಕಾಲೇಜುಗಳು, 72 ಅಸಂಘಟಿತ ಕ್ಷೇತ್ರಗಳ ಘಟಕಗಳು ಮತ್ತು 50ಕ್ಕೂ ಹೆಚ್ಚು ಸಗಟು ಗ್ರಾಹಕರನ್ನು ತಲುಪುವ ಗುರಿ ಹೊಂದಲಾಗಿದೆ.
ಎಲೆಕ್ಟ್ರಾನಿಕ್ ಮಾಹಿತಿ-ತಂತ್ರಜ್ಞಾನ ಇಲಾಖೆ ನಿರ್ದೇಶಕ ಡಾ.ಸಂದೀಪ್ ಚಟರ್ಜಿ ಮಾತನಾಡಿ, ಕ್ಲೀನ್ ಟು ಗ್ರೀನ್ ಅಭಿಯಾನಕ್ಕೆ ಎಲೆಕ್ಟ್ರಾನಿಕ್ ಉದ್ಯಮ ಮತ್ತು ಕಾಪೆರ್Çರೇಟ್ ಸಂಸ್ಥೆಗಳು ಸಹಯೋಗ ನೀಡುವಂತೆ ಮನವಿ ಮಾಡುತ್ತಿದ್ದೇವೆ. ನಮ್ಮ ಅಭಿಯಾನಕ್ಕೆ ಮೈಕ್ರೋಸಾಫ್ಟ್, ಕೆನಾನ್, ಎಲ್ಜಿ, ಲೆನೋವಾ, ಗೋದ್ರೇಜ್, ಒನಿಡಾ, ಐಎಫ್ಬಿ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗವಿದೆ ಎಂದು ತಿಳಿಸಿದರು.