ಅನರ್ಹ ಶಾಸಕರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಆ.27-ಖಾತೆಗಳ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂಧನ, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ಆಹಾರ, ಕಾರ್ಮಿಕ ಇಲಾಖೆ ಅಂತಹ ಮಹತ್ವದ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

22 ಖಾತೆಗಳನ್ನು ಹಂಚಿಕೆ ಮಾಡಿದ್ದು, ಉಳಿದ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.ಅನರ್ಹ ಶಾಸಕರ ಒತ್ತಡಕ್ಕೆ ಕಡೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿದಿದ್ದಾರೆ.ಖಾತೆಗಳ ಹಂಚಿಕೆಯಲ್ಲಿ ಮಹತ್ವದ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಳ್ಳುವ ಮೂಲಕ ಅನರ್ಹ ಶಾಸಕರ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ.ದೆಹಲಿ ಭೇಟಿ ವೇಳೆ ಅನರ್ಹ ಶಾಸಕರು ಈ ಷರತ್ತು ವಿಧಿಸಿದ್ದು, ಅದರಂತೆ ಸಿಎಂ ನಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂವರು ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ತಮ್ಮ ಸಂಪುಟದ 17 ಸಚಿವರಿಗೆ ಒಟ್ಟು 22 ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಬಾಕಿ ಉಳಿದಿರುವ 13 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ಹಣಕಾಸು, ಗುಪ್ತಚರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಂತಹ ಕೆಲ ಖಾತೆಯನ್ನು ಸಿಎಂ ಇರಿಸಿಕೊಳ್ಳುತ್ತಾರಾದರೂ ಅನಿವಾರ್ಯ ಕಾರಣದಿಂದ ಸಿಎಂ ಅನೇಕ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡದೆ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದು ಮುಖ್ಯಮಂತ್ರಿ ಆಗಿದ್ದ ಹೆಚï.ಡಿ.ಕುಮಾರಸ್ವಾಮಿ 11 ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರು.ಇದೀಗ ಇಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ 13 ಖಾತೆಗಳನ್ನು ಇರಿಸಿಕೊಂಡಿದ್ದಾರೆ.
ಸಿಎಂ ಬಳಿ ಇರುವ ಖಾತೆ:
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಹಣಕಾಸು
ಗುಪ್ತಚರ
ವಾರ್ತಾ ಮತ್ತು ಪ್ರಚಾರ
ಯೋಜನೆ ಮತ್ತು ಸಾಂಖ್ಯಿಕ
ಇಂಧನ
ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ, ವಾಣಿಜ್ಯ ಕೈಗಾರಿಕೆ
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ
ಕೌಶಲ್ಯಾಭಿವೃದ್ಧಿ ಇಲಾಖೆ
ಸಹಕಾರ ಇಲಾಖೆ
ಜಲಸಂಪನ್ಮೂಲ ಇಲಾಖೆ
ವೈದ್ಯಕೀಯ ಶಿಕ್ಷಣ
ತೋಟಗಾರಿಕಾ ಇಲಾಖೆ
ಕೃಷಿ ಇಲಾಖೆ
ಸಣ್ಣ ಕೈಗಾರಿಕಾ ಇಲಾಖೆ
ಪೌರಾಡಳಿತ ಇಲಾಖೆ
ನಗರಾಭಿವೃದ್ಧಿ ಇಲಾಖೆ
ರೇಷ್ಮೆ ಇಲಾಖೆ
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ
ಕಾರ್ಮಿಕ ಇಲಾಖೆ
ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ
ಅರಣ್ಯ ಮತ್ತು ಪರಿಸರ ಇಲಾಖೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ