ಬೆಂಗಳೂರು, ಆ.27- ಪ್ರಸ್ತುತ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸೇವಾ ಕ್ಷೇತ್ರದ ರಫ್ತಿನಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನಕ್ಕೆ ಸದ್ಯದಲ್ಲೇ ಬರುವ ನಿರೀಕ್ಷೆ ಇದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್ ತಿಳಿಸಿದರು.
ನಗರದ ಎಫ್ಕೆಸಿಸಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಫ್ತಿನ ಪೆÇ್ರೀ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯ ಜಾರಿಗೆ ತರಲಾಗಿದೆ. ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ರಫ್ತು ಕ್ಷೇತ್ರದಲ್ಲಿದೆ.ಸೇವಾ ಕ್ಷೇತ್ರದ ರಫ್ತಿನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.ಸದ್ಯದಲ್ಲೇ ಪ್ರಥಮ ಸ್ಥಾನಕ್ಕೆ ಬರುವ ನಿರೀಕ್ಷೆ ಇದೆ ಎಂದರು.
ಆಭರಣ ರಫ್ತು ಉದ್ಯಮದಲ್ಲಿ ಎರಡು ಶತಕೋಟಿ ವಹಿವಾಟಿನಿಂದ 17 ದಶಕೋಟಿ ವಹಿವಾಟಿಗೆ ಇಳಿಕೆಯಾಗಿದೆ.24 ಕ್ಯಾರೆಟ್ ಚಿನ್ನಾಭರಣದ ವಸ್ತುಗಳನ್ನು ನಿಷೇಧಿಸಲಾಗಿದೆ.22 ಕ್ಯಾರೆಟ್ ಆಭರಣಗಳಿಗೆ ಅವಕಾಶಗಳಿಗೆ ನೀಡಲಾಗಿದ್ದು, ರಫ್ತಿನಲ್ಲೂ ಇಳಿಕೆಯಾಗಿದೆ.ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಹೊಸ ಕೈಗಾರಿಕಾ ನೀತಿಯನ್ನು ರಚಿಸುತ್ತಿದೆ ಎಂದು ಹೇಳಿದರು.
ರಾಜ್ಯದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಬೆನ್ನೆಲುಬಾಗಿದೆ ಎಂದ ಅವರು, ಬಂಧರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ನ ಮಾದರಿಯಲ್ಲೇ ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ ಎಂದರು.
ಮಂಗಳೂರು ಮತ್ತು ಬೆಂಗಳೂರು ನಡುವಿನ ರಸ್ತೆ ಮಾರ್ಗಕ್ಕಿಂತ ರೈಲು ಮಾರ್ಗವೇ ಉದ್ಯಮಿಗಳಿಗೆ ಹೆಚ್ಚು ಪೂರಕವಾಗಿದೆ. ಕಾರಣ ವೆಚ್ಚವೂ ಕಡಿಮೆ ಹಾಗೂ ಅನುಕೂಲವೂ ಇದೆ ಎಂದು ಮನವಿಯೊಂದಕ್ಕೆ ಪ್ರತಿಕ್ರಿಯಿಸಿದರು.
ಚಿನ್ನಾಭರಣಗಳ ವಿನ್ಯಾಸಕ್ಕಾಗಿ ಜಿಲ್ಲೆಗೊಂದರಂತೆ ಡಿಸೈನಿಂಗ್ ಸ್ಟುಡಿಯೋ ಸ್ಥಾಪಿಸುವ ಸಂಬಂಧ ಮುಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಲಾಗುವುದು. ಐಟಿ-ಬಿಟಿ ಇಲಾಖೆಯಲ್ಲಿರುವ ಪೆÇ್ರೀ ಯೋಜನೆಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯಲಿಲ್ಲ. ಐಟಿ-ಬಿಟಿ ಇಲಾಖೆಯಲ್ಲಿ ಜಾರಿಯಲ್ಲಿರುವ ಎಲಿವೇಟ್ 100 ಮಾದರಿ ಯೋಜನೆಯನ್ನು ಇಲ್ಲೂ ಜಾರಿಗೆ ತರಲು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ಥರಿಗೆ ಉದಾರ ದೇಣಿಗೆ ನೀಡುವ ಮೂಲಕ ಅವರ ಸಂಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಸೋಚಮ್ನ ಸಂಪತ್ರಾಮನ್, ಸಿ.ಕೆ.ಜನಾರ್ಧನ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ನಿರ್ದೇಶಕ ಎಸ್.ಜಿಯಾವುಲ್ಲಾ, ಉದ್ಯಮಿಗಳಾದ ಕಿರಣ್ಕುಮಾರ್, ಪೆರಿಕಲ್ಸುಂದರ್, ರಾಮ್ಕುಮಾರ್, ರಾಮಶೇಷು ಮತ್ತಿತರರಿದ್ದರು.