ಬೆಂಗಳೂರು, ಆ.27-ಗಣಪತಿ ಉತ್ಸವದ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಏಕಗವಾಕ್ಷಿ ಸೇವೆಯನ್ನು ಒದಗಿಸುವ ಸಂಬಂಧ ಈ ಹಿಂದೆ ಕೈಗೊಂಡಿದ್ದ ಕ್ರಮಗಳು ಸೂಕ್ತ ರೀತಿಯಲ್ಲಿ ದೊರಕಲು ಸುತ್ತೋಲೆ ಮೂಲಕ ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ಸೂಚನೆ ನೀಡುವಂತೆ ಬೆಂಗಳೂರು ನಗರ ಯುವ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ.
ಗಣೇಶ ಉತ್ಸವಕ್ಕೆ ಸಂಬಂಧಪಟ್ಟಂತೆ ಪೆÇಲೀಸ್ ಠಾಣೆ ಹಾಗೂ ಇತರೆ ಇಲಾಖೆಗಳಿಂದ ಅನುಮತಿ ಪಡೆಯಲು ಏಕಗವಾಕ್ಷಿ ಸೇವೆ ಒದಗಿಸಲು ಬಿಬಿಎಂಪಿಯಿಂದ ಸುತ್ತೋಲೆ ಹೊರಡಿಸಲಾಗುತ್ತದೆ.
ಸ್ಥಳೀಯರು ಬಿಬಿಎಂಪಿ ಕಚೇರಿ ಉಪವಿಭಾಗ ಒಳಗೊಂಡಂತೆ, ಅಗ್ನಿಶಾಮಕ ದಳ, ಬೆಸ್ಕಾಂ ಇನ್ನಿತರ ಅಧಿಕಾರಿಗಳ ಅನುಮತಿ ಪಡೆಯಲು ದೀರ್ಘ ಕಾಲದ ಅವಶ್ಯಕತೆ ಇರುತ್ತದೆ.ಜೊತೆಗೆ ಈ ಅರ್ಜಿ ವಿಲೇವಾರಿಗೂ ವಿಳಂಬವಾಗುವುದರಿಂದ ನಿಗದಿತ ದಿನಾಂಕದೊಳಗೆ ಮೂರ್ತಿಯ ಸ್ಥಾಪನೆಗೆ ತೊಂದರೆ ಎದುರಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಸಂಬಂಧಪಟ್ಟ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ಮಾಹಿತಿ ಹಾಗೂ ಇಲಾಖೆಗಳ ಅನುಮತಿ ಪಡೆಯಲು ವ್ಯವಸ್ಥೆ ಕಲ್ಪಿಸಿ ಒಂದೆರಡು ದಿನಗಳಲ್ಲೇ ಅನುಮತಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಮನೋಹರ್ ಮನವಿ ಮಾಡಿದ್ದಾರೆ.