
ನವದೆಹಲಿ, ಆ. 26- ಅನರ್ಹ ಶಾಸಕರ ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಈ ಮೂಲಕ ಅನರ್ಹ ಶಾಸಕರಿಗೆ ಮತ್ತೆ ಹಿನ್ನೆಡೆಯಾದಂತಾಗಿದೆ.ಸ್ಪೀಕರ್ ಅವರ ಅನರ್ಹತೆ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ತುರ್ತು ಕೈಗೆತ್ತಿಕೊಳ್ಳುವಂತೆ ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ಎಸ್.ಪಿ.ರಮಣ್ ನೇತೃತ್ವದ ಪೀಠ ಇಂದು ತುರ್ತು ವಿಚಾರಣೆ ನಡೆಸಲು ನಿರಾಕರಿಸಿ ಸಹಜವಾಗಿ ಕಾರ್ಯಕಲಾಪದ ವೇಳಾಪಟ್ಟಿಯಂತೆ ಅರ್ಜಿ ಬರಲಿ ವಿಚಾರಣೆ ಮಾಡೋಣ ಎಂದು ಸೂಚಿಸಿತು.
ಇದರಿಂದ ಅನರ್ಹ ಶಾಸಕರಿಗೆ ತೀವ್ರ ಹಿನ್ನೆಡೆಯಾಯಿತು. ಸಂಪುಟ ಸೇರಲು ಮುಂದಾಗಿದ್ದ ಇವರಗೆ ಆಸೆಗೆ ತಣ್ಣೀರು ಸುರಿದಂತಾಯಿತು. ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರು, ತಮ್ಮ ಜೂನಿಯರ್ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು.
ನಾಳೆ ಮುಖ್ಯ ನ್ಯಾಯಾಧೀಶರಿಗೆ ಅರ್ಜಿವಿಚಾರಣೆ ತುರ್ತು ನಡೆಸಲು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.ಅಯೋಧ್ಯೆ ವಿವಾದ ಸಂಬಂಧಿಸಿದಂತೆ ಮುಖ್ಯ ನ್ಯಾಯಧೀಶರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಬೇರೆ ಅರ್ಜಿಗಳನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ನಮ್ಮ ಅರ್ಜಿಯನ್ನು ಸಲ್ಲಿಸಿ ವಿಚಾರಣೆಗೆ ಮನವಿ ಮಾಡಿಕೊಳ್ಳುವುದಾಗಿ ರೋಹ್ಟಗಿ ತಿಳಿಸಿದರು.