ಸ್ವಿಟ್ಜರ್ಲ್ಯಾಂಡ್ನ ಬಾಸೆಲ್ನಲ್ಲಿ ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪಿ. ವಿ.
ಸಿಂಧು ಸತತ ಮೂರನೇ ಬಾರಿಗೆ ಫೈನಲ್ಗೆ ಪ್ರವೇಶಿಸಿದರು.
40 ನಿಮಿಷಗಳ ಸೆಮಿಫೈ ನಲ್ ಆಟದಲ್ಲಿ ಅವರು ಚೀನಾದ ವಿಶ್ವದ 3 ನೇ ಶ್ರೇಯಾಂಕಿತೆ ಚೆನ್ರನ್ನು 21-7, 21-14ರಿಂದ
ಮಣಿಸಿದರು. ಪ್ರತಿಷ್ಠಿತ ಪಂದ್ಯಾವಳಿಯ ಕೊನೆಯ ಎರಡು ಆವೃತ್ತಿಗಳಲ್ಲಿ ಎರಡು ಕಂಚಿನ ಪದಕ ಹೊರತುಪಡಿಸಿ, ಸಿಂಧು
ಅವರು ಸತತ ಬೆಳ್ಳಿ ಪದಕ ಪಡೆದಿದ್ದರು.
ನಾಳೆ ನಡೆಯಲಿರುವ ಪಂದ್ಯದಲ್ಲಿ 24 ವರ್ಷದ ಸಿಂಧು ಅವರು 2013 ರ ವಿಶ್ವ ಚಾಂಪಿಯನ್ ಥೈಲ್ಯಾಂಡ್ನ ರಾಚ್ನೋಕ್
ಇಂಟಾನಾನ್ ಅಥವಾ 2017 ರ ಪ್ರಶಸ್ತಿ ವಿಜೇತೆ ಜಪಾನ್ನ ನೊಜೋಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ.