ಶ್ರೀಕೃಷ್ಣನ ಜನ್ಮದಿನವನ್ನು ‘ಜನ್ಮಾಷ್ಟಮಿ’ಯಾಗಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ
ಇಂದು ಆಚರಿಸಲಾಯಿತು.
ಉತ್ತರಪ್ರದೇಶದಲ್ಲಿ ಧಾರ್ಮಿಕ ಆಚರಣೆ ಮತ್ತು ಸಂಭ್ರಮದಿಂದ ಶ್ರೀಕೃಷ್ಣ ಜಯಂತಿಯನ್ನು ಆಚರಿಸ ಲಾಯಿತು.
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ವಿಶೇಷವಾಗಿ ಕೊಲ್ಹಾಪುg,À ಸಾಂಗ್ಲಿ ಜಿಲ್ಲೆಗಳಲ್ಲಿ ಈ ತಿಂಗಳ ಆರಂಭದಲ್ಲಿ ಉಂಟಾಗಿದ್ದ
ಪ್ರವಾಹದ ಹಿನ್ನೆಲೆಯಲ್ಲಿ ದಹಿ ಹಂಡಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಹಲವು ದಹಿ ಹಂಡಿ ಮಂಡಲಗಳು ಮತ್ತು ಸಂಘಟನೆಗಳು ಮುಂಬೈ ಮತ್ತು ರಾಜ್ಯದ ಇತರೆ ಕಡೆಗಳಲ್ಲಿ ಜನ್ಮಾಷ್ಟಮಿಗಳನ್ನು
ಸರಳವಾಗಿ ಆಚರಿಸಿ, ಪ್ರವಾಹ ಸಂತ್ರಸ್ತರೊಂದಿಗೆ ಐಕ್ಯತೆ ಪ್ರದರ್ಶಿಸಿದರು.
ಕೆಲವು ಮಂಡಲಗಳು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ನೆರವು ನೀಡಿದವು. ಇಂದು ಬೆಳಿಗ್ಗೆಯಿಂದಲೇ ನಗರದ ಹಲವು
ಪ್ರಮುಖ ರಸ್ತೆಗಳಲ್ಲಿ ಗೋವಿಂದ ಮಂಡಲಗಳು ಕಂಡು ಬಂದವು. ಸ್ಪರ್ಧೆಯಲ್ಲಿ ಪುರುಷರು ಮಾತ್ರವಲ್ಲದೆ , ಮಹಿಳೆಯರು
ಕೂಡ ಭಾಗವಹಿಸಿದ್ದರು. ಗುಜರಾತ್ನ ಜಗತ್ಮಂದಿರ -ದ್ವಾರಿಕಾ ಮತ್ತು ದಕೊರ್ನ ಭಗವಾನ್ ರಂಚೋದ್ರಯ್
ದೇವಾಲಯಗಳಲ್ಲಿ ಪ್ರಮುಖ ಆಚರಣೆಗಳು ನಡೆಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.
ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಜನ್ಮಾಷ್ಟಮಿಯ ಅಂಗವಾಗಿ ಜನರಿಗೆ ಶುಭಕೋರಿದ್ದಾ ರೆ. ಭಗವಾನ್ ಕೃಷ್ಣ
ದೇಶದ ಜನರಿಗೆ ಈ ಹಬ್ಬದ ಸಂದರ್ಭದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.