ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಬುದಾಬಿಯ ಯುವರಾಜ ಶೇಖ್ ಮೊಹ್ಮದ್ ಬಿನ್ ಜಾಯದ್ ಅಲ್ ನಹ್ಯಾನ್
ಅವರೊಂದಿಗೆ ಭಾರತ ಮತ್ತು ಯುಎಇ ಸಹಭಾಗಿತ್ವದ ಮತ್ತಷ್ಟು ವೃದ್ದಿಗೊಳಿಸುವ ಬಗ್ಗೆ ಚರ್ಚೆ ನಡೆಸಿದರು.
ಈ ಬಗ್ಗೆ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದು, ಭಾರತ ಮತ್ತು ಯುಎಇ ನಡುವ ವ್ಯಾಪಾರ ಮತ್ತು ಜನರ ನ ಡುವಿನ ಸಂಬಂಧ
ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ
ವಿಷಯದಲ್ಲಿ ಯುವರಾಜನ ವೈಯಕ್ತಿಕ ಬದ್ಧತೆ ಹೆಚ್ಚು ಬಲಿಷ್ಠವಾಗಿದೆ ಎಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ಟ್ವೀಟ್ ಮಾಡಿ, ಉಭಯ ನಾಯಕರು ಭಾರತ -ಯುಎಇ ಸಮಗ್ರ
ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಪೂರ್ಣ ಪ್ರಮಾಣದ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಜಾಯದ್ ನೀಡಿ
ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಟ್ವೀಟ್ ಮಾಡಿದ ಪ್ರಧಾನಮಂತ್ರಿ, ಈ ಪ್ರಶಸ್ತಿಯು ಭಾರತದ ಸಂಸ್ಕøತಿ ಮತ್ತು 130
ಕೋಟಿ ಜನರಿಗೆ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಅವರು ರುಪೇ ಕಾರ್ಡ್‍ನ್ನು ಬಿಡುಗಡೆ ಮಾಡಿದರು. ಮಧ್ಯಪ್ರಾಚ್ಯದಲ್ಲಿ ಈ ಸೌಲಭ್ಯ ಪಡೆಯುತ್ತಿರುವ
ಮೊದಲ ದೇಶ ಯುಎಇ ಆಗಿದೆ. ಎಮಿರೇಟ್ಸ್ ನ್ಯೂಸ್ ಎಜೆನ್ಸಿಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಮಂತ್ರಿ
ನರೇಂದ್ರ ಮೋದಿ, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಉದ್ದೇಶಿತ ಗುರಿ ಸಾಧನೆಯಲ್ಲಿ ಸಂಯುಕ್ತ ಅರಬ್
ಎಮಿರೇಟ್ಸ್ -ಯುಎಇ ಭಾರತದ ಮೌಲ್ಯಯುತ ಪಾಲುದಾರ ದೇಶವಾಗಿದೆ ಎಂದು ಹೇಳಿದ್ದಾರೆ.
2024-25 ರ ವೇಳೆಗೆ ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್‍ಗೆ ಹೆಚ್ಚಿಸುವ ಮಹತ್ತರವಾದ ಗುರಿಯನ್ನು
ಭಾರತ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ 1.7 ಟ್ರಿಲಿಯನ್ ಡಾಲರ್ ಹೂಡಿಕೆ ಮೊತ್ತದ ಗುರಿಯನ್ನು ಭಾರತ
ನಿಗದಿಪಡಿಸಿದೆ. ಈ ಗುರಿ ಸಾಧನೆಗೆ ದೇಶೀಯ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಸರ್ಕಾರ
ಪ್ರಯತ್ನಿಸುತ್ತಿದೆ ಎಂದರು.
ಯುಎಇ ಮತ್ತು ಭಾರತದ ಸಂಬಂಧ ಅತ್ಯುತ್ತಮ ಮಟ್ಟದ್ದಾಗಿದ್ದು, ಪುನರ್ ನವೀಕರಣ ಇಂಧನ, ಆಹಾರ, ಬಂದರು, ವಿಮಾನ
ನಿಲ್ದಾಣಗಳು, ರಕ್ಷಣಾ ಉತ್ಪನ್ನಗಳು ಮತ್ತಿತರ ವಲಯಗಳಲ್ಲಿ ಭಾರತದಲ್ಲಿ ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು
ಹೇಳಿದರು.
ಯುಎಇಯಲ್ಲಿರುವ ಭಾರತೀಂiÀ ು ಸಮುದಾಯದ ಬಗ್ಗೆ ಮಾತನಾಡಿದ ಅವರು, ಆಧುನಿಕ, ವೈವಿದ್ಯಮಯ ಮತ್ತು ಚಲನಶೀಲ
ಯುಎಇ ನಿರ್ಮಾಣಕ್ಕೆ ಭಾರತೀಯ ಸಮುದಾಯ ನೀಡಿರುವ ಕೊಡುಗೆಗೆ ದೇಶ ಹೆಮ್ಮೆ ಪಡುತ್ತದೆ ಎಂದರು.