ಬೆಂಗಳೂರು: ಟಿ.ಆರ್ ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ಸಿಎಂ ಯಡಿಯೂರಪ್ಪ ಅವರ ಸರ್ಕಾರ ವಾಪಸ್ ಪಡೆದಿದೆ.
ಟಿ.ಆರ್.ಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಕೇಳಿಬಂದಿದ್ದ ಕಾರಣ ಹಿಂದಿನ ಸರ್ಕಾರ ಅವರನ್ನು ಅಮಾನತು ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ರಚನೆ ಆದ ನಂತರದಲ್ಲಿ ಮತ್ತೆ ಟಿ.ಆರ್ ಸ್ವಾಮಿಗೆ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ನೀಡಲಾಗಿತ್ತು.
ಕಳೆದ ವರ್ಷ ಆಕ್ಟೋಬರ್ ನಲ್ಲಿ ಎಸಿಬಿ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಟಿ.ಆರ್.ಸ್ವಾಮಿಯನ್ನು ಮತ್ತೆ ನೇಮಕ ಮಾಡಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಈ ಹುದ್ದೆಯನ್ನು ವಾಪಸ್ ಪಡೆದಿದೆ ಎಂದು ವರದಿಯಾಗಿದೆ.