ಬೆಂಗಳೂರು, ಆ. 23- ಶ್ರೀ ಲಕ್ಷ್ಮಿ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತ ವತಿಯಿಂದ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮವನ್ನು ಇದೇ 25 ರಂದು ಜೆ.ಸಿ ರಸ್ತೆಯ ಟೌನ್ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷೆ ಕಮಲಾ ನಟರಾಜನ್ ವಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ 1995ನೇ ಜನವರಿ 11 ಸ್ಥಾಪನೆಗೊಂಡಿತ್ತು. ಅಂದಿನಿಂದ ಎಲ್ಲರಿಗಾಗಿ ಮತ್ತು ಎಲ್ಲರೂ ತನಗಾಗಿ ಎಂಬ ಸಹಕಾರ ತತ್ವದಡಿಯಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಾ ಬಂದಿದೆ. 10896 ಸದ್ಯರುಗಳನ್ನು ಒಳಗೊಂಡಿರುವ ಬ್ಯಾಂಕ್ 25 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ರಾಜ್ಯಪಾಲ ವಜುಬಾಯಿ ವಾಲಾ ಉದ್ಘಾಟನೆ ಮಾಡಲಿದ್ದು, ಮಾಜಿ ಸಚಿವ ಡಾ.ಪರಮೇಶ್ವರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಚ್.ಕೆ ಪಾಟೀಲ್ ಬ್ಯಾಂಕಿನ ವೆಬ್ಸೈಟ್ ಬಿಡುಗಡೆ ಮಾಡಲಿದ್ದು ಶಾಸಕ ವಿ.ಸೋಮಣ್ಣ ರಿಸರ್ವ್ ಬ್ಯಾಂಕ್ ಜೋಸ್ ಜೆ.ಕಟೂರ್ ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.