ಬ್ಲಾಕ್ ಕ್ಯಾಟ್ಸ್ ನೀನೇನೆ ಆಲ್ಬಂ ಬಿಡುಗಡೆ

ಬೆಂಗಳೂರು, ಆ.23-ಕನ್ನಡದ ಮೊಟ್ಟಮೊದಲ ವಿಡಿಯೋ ಆಲ್ಬಂ ಮಾಡಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬ್ಲಾಕ್ ಕ್ಯಾಟ್ಸ್ ತಂಡ ಇದೀಗ ವಿಭಿನ್ನ ಕಥಾ ಹಂದರವುಳ್ಳ ಬ್ಲಾಕ್ ಕ್ಯಾಟ್ಸ್ ನೀನೇನೆ ಆಲ್ಬಂ ಬಿಡುಗಡೆ ಮಾಡುತ್ತಿದೆ.

ಬ್ಲಾಕ್‍ಕ್ಯಾಟ್ಸ್ ನೀನೇನೆ ವಿಭಿನ್ನವಾದ ಎರಡು ಕಥಾಹಂದರವನ್ನು ಹೊಂದಿದ್ದು, ಬ್ರೇಕ್‍ಅಪ್ ಆ್ಯಂತೆಮ್ ಎಂಬ ಟ್ಯಾಗ್‍ಲೈನ್ ಹೊಂದಿದೆ. ಒಂದು ಬ್ರೇಕ್‍ಅಪ್ ಗೀತೆಯನ್ನು ರಾಕ್‍ಬ್ಯಾಂಡ್ ಶೈಲಿಯಲ್ಲಿ ಮಾಡಲಾಗಿದೆ.

ಅಮೃತ-ವರ್ಷಿಣಿ ಧಾರಾವಾಹಿ ಖ್ಯಾತಿಯ ರಜನಿ, ಸೌತ್ ಏಷಿಯಾ ಮಾಡೆಲ್ ತೇಜಸ್ವಿನಿ, ಬಾಲು ವಿ.ಜಿ.ಎಸ್, ಕಾರ್ತಿಕ್‍ಬಿ.ಜಿ, ಸುಜಿತ್.ಡಿ.ಎಸ್, ರಾಜು ಭಾಗ್ಯಶ್ರೀ, ಕರಿಬಸಪ್ಪ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪ್ರೀತು ದಿವ್ಯ ಹಾಗೂ ಸೌಹಾರ್ದ ರಾಕ್‍ಬ್ಯಾಂಡ್ ತಂಡದಲ್ಲಿದ್ದಾರೆ.

ಈ ಗೀತೆಯು ನಾಳೆ ಸಂಜೆ (ಆ.24) 6.09ಕ್ಕೆ ಬ್ಲಾಕ್ ಕ್ಯಾಟ್ಸ್ ಸ್ಟುಡಿಯೋ ಯುಟೂಬ್ ಚಾನಲ್‍ನಲ್ಲಿ ಬಿಡುಗಡೆಯಾಗಲಿದೆ.

ದೇಶಭಕ್ತಿ ಹಾಗೂ ಸೈನಿಕರ ನಿಸ್ವಾರ್ಥ ಸೇವೆಗೆ ನಮನ ಸಲ್ಲಿಸುವ ಮ್ಯೂಸಿಕ್ ಆಲ್ಬಂ ವೊಂದನ್ನು ಬ್ಲಾಕ್ ಕ್ಯಾಟ್ಸ್ ತಂಡ ಹೊರತಂದಿದೆ.

ಎ ಟ್ರಿಬ್ಯೂಟ್ ಹೆಸರಿನ ಈ ಆಲ್ಬಂ ಆರು ಗೀತೆಗಳನ್ನು ಒಳಗೊಂಡಿದೆ. 2011ರಲ್ಲಿ ಬ್ಲಾಕ್ ಕ್ಯಾಟ್ಸ್ ತಂಡ ಕ್ರಿಕೆಟ್ ವಲ್ರ್ಡ್ ಕಪ್ ಥೀಮ್‍ಸಾಂಗ್‍ಒಳಗೊಂಡ ಗೆದ್ದು ಬಾ ಇಂಡಿಯಾ ವಿಡಿಯೋ ಆಲ್ಬಂ ಹೊರತಂದಿದ್ದು, ಇದು ಭಾರೀ ಹೆಸರು ಮಾಡಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ತಂಡದ ಕಾರ್ತಿಕ್ ಚೇತನ್ ತಿಳಿಸಿದರು.

2015ರಲ್ಲೂ ಕ್ರಿಕೆಟ್ ವಲ್ರ್ಡ್ ಕಪ್ ಥೀಮ್ ಸಾಂಗ್ ನಾ…ನ…ನ..ನಾ..ಮ್ಯೂಸಿಕ್ ವಿಡಿಯೋ ಹೊರತಂದಿತ್ತು. ಇದಾದ ನಂತರ ಕನ್ನಡ ಮ್ಯೂಸಿಕ್ ಆಲ್ಬಂ ಇಂಡಸ್ಟ್ರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕೆಂಬ ಮಹದಾಸೆಯಿಂದ ಇದೀಗ ಬ್ಲಾಕ್ ಕ್ಯಾಟ್ಸ್ ನೀನೇನೆ ಎಂಬ ಶೀರ್ಷಿಕೆಯ ಬಿಸಿಎಲ್ ಸಂಸ್ಥೆ ನಿರ್ಮಿಸಿರುವ ಹೊಚ್ಚ ಹೊಸ ಗೀತೆಯನ್ನು ಪ್ರಸ್ತುತ ಪಡಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ