ನವದೆಹಲಿ, ಆ.21-ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಇಂದು ಸುಪ್ರೀಂಕೋರ್ಟ್‍ಗೆ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.
ಅಲ್ಲದೇ ಈ ಪ್ರಕರಣದಲ್ಲಿ ತಮಗೆ ಸಿಬಿಐ ಬಂಧನದಿಂದ ರಕ್ಷಣಿ ನೀಡುವಂತೆಯೂ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ತಮ್ಮನ್ನು ಈ ಪ್ರಕರಣದಲ್ಲಿ ಕಿಂಗ್‍ಪಿಂಗ್ ಎಂಬ ದೆಹಲಿ ಹೈಕೋರ್ಟ್ ಹೇಳಿಕೆಯು ಸಂಫೂರ್ಣ ಆಧಾರರಹಿತ ಮತ್ತು ಇದಕ್ಕೆ ಯಾವುದೇ ಸಾP್ಷÁ್ಯಧಾರಗಳಿಲ್ಲ ಎಂದು ಚಿದು ಸುಪ್ರೀಂಕೋರ್ಟ್‍ನಲ್ಲಿ ವಾದಿಸಿದ್ದಾರೆ.
ಚಿದು ಪರ ವಕೀಲ ಕಪಿಲ್ ಸಿಬಲ್ ಅವರು ಇಂದು ಬೆಳಗ್ಗೆ ನ್ಯಾಯಮೂರ್ತಿ ಜೆ.ಎನ್.ವಿ. ರಮಣ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಿದರು. ಈ ಮನವಿಯನ್ನು ಮಾನ್ಯ ಮಾಡಿದ ಪೀಠವು ತುರ್ತು ವಿಚಾರಣೆಗಾಗಿ ಪರಿಗಣಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಸಲ್ಲಿಸುವುದಾಗಿ ತಿಳಿಸಿದೆ.
ಸಿಬಿಐಗೆ ಚಿದು ವಕೀಲರ ತಂಡ ಮನವಿ
ಈ ಮಧ್ಯೆ, ಚಿದಂಬರಂ ಅವರನ್ನು ಬಂಧನದಿಂದ ರಕ್ಷಿಸಲು ಮುಂದಾಗಿರುವ ವಕೀಲರ ತಂಡವೊಂದು ಸಿಬಿಐಗೆ ಮನವಿ ಮಾಡಿ, ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವ ತನಕ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಆಗ್ರಹಿಸಿದೆ.
ಈ ಸಂಬಂಧ ಚಿದು ಪರ ಮತ್ತೊಬ್ಬ ವಕೀಲ ಅರ್ಷ್‍ದೀಪ್ ಖುರಾನಾ ಅವರು ಕೇಂದ್ರೀಯ ತನಿಖಾ ದಳಕ್ಕೆ ಮನವಿ ಮಾಡಿ, ಈ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತೀರ್ಪ ಬರುವ ತನಕ ಕೇಂದ್ರದ ಮಾಜಿ ಸಚಿವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಒತ್ತಾಯಿಸಿದೆ.