ನೂತನ ಸಂಪುಟ ಸಚಿವರಿಗೆ ಕೊಠಡಿಗಳ ಹಂಚಿಕೆ

ಬೆಂಗಳೂರು, ಆ.21- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೂತನ ಸಂಪುಟ ಸಚಿವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ವಿಧಾನಸೌಧದಲ್ಲಿ ನೂತನ ಸಚಿವರಾದ ಗೋವಿಂದ ಎಂ.ಕಾರಜೋಳ ಅವರಿಗೆ 340-340ಎ, ಡಾ.ಅಶ್ವತ್ಥ ನಾರಾಯಣ ಅವರಿಗೆ (ವಿಕಾಸಸೌಧದ) 242-243, ಲಕ್ಷ್ಮಣ ಸವದಿಗೆ 301, 301ಎ, ಕೆ.ಎಸ್.ಈಶ್ವರಪ್ಪ 329-329ಎ, ಆರ್.ಅಶೋಕ್ 317-317ಎ, ಜಗದೀಶ್ ಶೆಟ್ಟರ್ 315-315ಎ, ಬಿ.ಶ್ರೀರಾಮುಲು 328-328ಎ, ಸುರೇಶ್‍ಕುಮಾರ್ 262-262 (ಎ) 201 (ಎಫ್), ವಿ.ಸೋಮಣ್ಣ 314-314 (ಎ), ಸಿ.ಟಿ.ರವಿ 344-344 (ಎ), ಬಸವರಾಜ ಬೊಮ್ಮಾಯಿ 327-327(ಎ), ಕೋಟಾ ಶ್ರೀನಿವಾಸ ಪೂಜಾರಿ 336-336 (ಎ), ಜೆ.ಸಿ.ಮಾಧುಸ್ವಾಮಿ 316-316(ಎ), ಸಿ.ಸಿ.ಪಾಟೀಲ್ 305-305(ಎ), ಎಚ್.ನಾಗೇಶ್ (342-342 (ಎ), ಪ್ರಭು ಚೌಹಾಣ್ 143-146 (ವಿಕಾಸಸೌಧ), ಶಶಿಕಲಾ ಜೊಲ್ಲೆ 141-142 (ವಿಕಾಸಸೌಧ) ಕೊಠಡಿಯನ್ನು ಹಂಚಿಕೆ ಮಾಡಲಾಗಿದೆ.

ನಿನ್ನೆಯಷ್ಟೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ