ಬೆಂಗಳೂರು: ಚಂದ್ರಯಾನ-2 ಬಾಹ್ಯಾಕಾಶ ನೌಕೆ ಮಂಗಳವಾರ ಬೆಳಗ್ಗೆ ಯಶಸ್ವಿಯಾಗಿ ಚಂದ್ರನ ಕಕ್ಷೆ ಪಯಣ ನಡೆಸಿದೆ. 30 ದಿನಗಳ ಕಾಲ ಪಯಣ ಬೆಳೆಸಿದ ಚಂದ್ರಯಾನ-2 ಯಶಸ್ವಿಯಾಗಿ ಇಂದು ಕಕ್ಷೆಯಲ್ಲಿ ತನ್ನ ಚಲನೆ ಮುಂದುವರಿಸಿದೆ.
ಚಂದ್ರಯಾನ-2ರ ಚಂದ್ರನ ಕಕ್ಷೆಯ ಅಳವಡಿಕೆ(LOI) ಚಲನೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದು ಈ ಪಯಣದ ಕಾರ್ಯಾಚರಣೆ ಅವಧಿ ಭಾರತೀಯ ಕಾಲಮಾನದ ಪ್ರಕಾರ 0902 ಗಂಟೆಯಿಂದ ಆರಂಭವಾಗಿ 1738 ಸೆಕೆಂಡ್ ಗಳಾಗಿದ್ದವು.
ಚಂದ್ರಯಾನ-2 ಇದುವರೆಗಿನ ಭಾರತದ ಸ್ವದೇಶಿ ಚಂದ್ರಯಾನದಲ್ಲಿ ಕಠಿಣವಾದ ಕಾರ್ಯಾಚರಣೆಯಾಗಿತ್ತು. ಇಂದು ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರಿಸಿದ ನಂತರ ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ ಚಂದ್ರನ ಧ್ರುವದ ಮೇಲೆ ಅಂತಿಮ ಕಕ್ಷೆಯ ಮೂಲಕ ಹಾದುಹೋಗಲು ಬಾಹ್ಯಾಕಾಶ ನೌಕೆ ಪ್ರವೇಶಿಸಲು ಇನ್ನೂ ನಾಲ್ಕು ಸುತ್ತಿನ ಕಕ್ಷೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಇಸ್ರೊ ಹೇಳಿದೆ.
ಇದೇ ಹೊತ್ತಿಗೆ ವಿಕ್ರಮ್ ಉಡಾಯಣಾ ವಾಹಕ ಸೆಪ್ಟೆಂಬರ್ 2ರಂದು ಕಕ್ಷೆಗಾಮಿಯಿಂದ ಪ್ರತ್ಯೇಕವಾಗಲಿದೆ ಎಂದು ಇಸ್ರೊ ಹೇಳಿದೆ. ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆ ಸುಲಭವಾಗಿ ಇಳಿಯುವಂತೆ ಮಾಡಲು ಎರಡು ಕಕ್ಷಾ ಕಾರ್ಯಾಚರಣೆಯನ್ನು ಗ್ರಹ ನೌಕೆಯ ಮೇಲೆ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಚಂದ್ರಯಾನ -2 ಬಾಹ್ಯಾಕಾಶ ನೌಕೆ ಜುಲೈ 22ರಂದು ಜಿಎಸ್ ಎಲ್ ವಿ ಎಂಕೆ3-ಎಂ1 ಉಡಾವಣಾ ವಾಹಕದ ಮೂಲಕ ಉಡಾಯಿಸಲ್ಪಟ್ಟಿತ್ತು. ಅದು ಮೊನ್ನೆ ಆಗಸ್ಟ್ 14ರಂದು ಚಂದ್ರ ವರ್ಗಾವಣೆ ಪಥವನ್ನು ಪ್ರವೇಶಿಸಿತು.