ಈ ವಸ್ತುಗಳನ್ನೂ ಡೆಲಿವರಿ ಮಾಡುತ್ತಾ ಸ್ವಿಗ್ಗಿ?; ಜೈಲು ಸೇರಿದ ಡೆಲಿವರಿ ಬಾಯ್ ಬ್ಯಾಗ್​ನಲ್ಲೇನಿತ್ತು ಗೊತ್ತಾ?

ವಡೋದರ : ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಜೊಮ್ಯಾಟೋ ರೀತಿಯ ಅನೇಕ ಆ್ಯಪ್ಗಳು ಜನರನ್ನು ಆಕರ್ಷಿಸುತ್ತಿವೆ. ಇತ್ತೀಚೆಗಷ್ಟೇ ಜೊಮ್ಯಾಟೋ ಡೆಲಿವರಿ ಬಾಯ್ಬಗ್ಗೆ ಟ್ವಿಟ್ಟರ್ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಅದರ ಬೆನ್ನಲ್ಲೇ ಸ್ವಿಗ್ಗಿ ಆ್ಯಪ್ ಕೂಡ ಅದೇ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಗುಜರಾತ್​ನ ವಡೋದರದಲ್ಲಿ ಗ್ರಾಹಕನಿಗೆ ಡೆಲಿವರಿ ನೀಡಲು ಹೋಗಿದ್ದ ಡೆಲಿವರಿ ಬಾಯ್ ಆಹಾರ ಪದಾರ್ಥದ ಬದಲು ಬಿಯರ್ ಕ್ಯಾನ್​ಗಳನ್ನು​ ಕೊಂಡೊಯ್ಯುತ್ತಿದ್ದ. ಆ ಡೆಲಿವರಿ ಬಾಯ್ ಬ್ಯಾಗ್​ನಲ್ಲಿದ್ದ 6 ಬಿಯರ್ ಕ್ಯಾನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಹುಲ್ ಸಿನ್ಹಾ ಮಹೀದಾ 6 ಬಿಯರ್ ಕ್ಯಾನ್​ಗಳನ್ನು ಬ್ಯಾಗ್​ನೊಳಗೆ ಅಡಗಿಸಿಟ್ಟುಕೊಂಡಿದ್ದ. ಆ ಬ್ಯಾಗ್ ಮೇಲೆ ಸ್ವಿಗ್ಗಿ ಎಂದು ಬರೆದುಕೊಂಡಿತ್ತು. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹೀದಾ ಇತ್ತೀಚೆಗೆ ಸ್ವಿಗ್ಗಿ ಆನ್​ಲೈನ್​ ಡೆಲಿವರಿ ಸಂಸ್ಥೆಯನ್ನು ಸೇರಿಕೊಂಡಿದ್ದರು. ಇದಕ್ಕೂ ಮೊದಲು ಕೂಡ ಕೆಲವು ಬಾರಿ ಗ್ರಾಹಕರಿಗೆ ಮದ್ಯದ ಬಾಟಲಿಗಳನ್ನು ಡೆಲಿವರಿ ನೀಡಿದ್ದ. ಇದುವರೆಗೂ ಸಿಕ್ಕಿಹಾಕಿಕೊಳ್ಳದ ಕಾರಣ ಈ ಬಾರಿಯೂ ಧೈರ್ಯವಾಗಿ ಮದ್ಯ ಸಾಗಿಸುತ್ತಿದ್ದ. ಆದರೆ, ಗ್ರಾಹಕನಿಗೆ ಡೆಲಿವರಿ ನೀಡುವ ಮೊದಲೇ ಪೊಲೀಸರು ಮಹೀದಾನನ್ನು ಬಂಧಿಸಿದ್ದಾರೆ. ರಾಹುಲ್ ಸಿನ್ಹಾ ಮಹೀದಾ ಅವರ ಬೈಕ್, ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ