ಮುಂಬೈ, ಆ.19- ಮೂಲಸೌಕರ್ಯ ಗುತ್ತಿಗೆ ಮತ್ತು ಹಣಕಾಸು ಸೇವೆ (ಐಎಲ್ ಅಂಡ್ ಎಫ್‍ಎಸ್) ಸಮೂಹ ಸಂಸ್ಥೆಯ ಹಣಪಾವತಿ ಸುಸ್ತಿ ಪ್ರಕರಣದಲ್ಲಿ ಹಣಕಾಸು ದುರ್ಬಳಕೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‍ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ರಾಜ್ ಠಾಕ್ರೆ ಅವರಲ್ಲದೇ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖಂಡ ಮನೋಹರ್ ಜೋಷಿ ಅವರ ಪುತ್ರ ಉನ್ಮೇಶ್ ಜೋಷಿ ಅವರಿಗೂ ಇದಿಡಿ ಇದೇ ಪ್ರಕರಣದಲ್ಲಿ ಸಮಸ್ನ್ ನೀಡಿದೆ.
ತನಿಖಾಧಿಕಾರಿ ಅವರ ಮುಂದೆ ಆಗಸ್ಟ್ 22ರಂದು ವಿಚಾರಣೆಗೆ ಹಾಜರಾಗುವಂತೆ ಠಾಕ್ರೆ ಅವರಿಗೆ ಸಮನ್ಸ್‍ನಲ್ಲಿ ಸೂಚಿಸಲಾಗಿದೆ.
ಉನ್ಮೇಶ್ ಜೋಷಿ ಪ್ರವರ್ತನಗೊಳಿಸಿದ್ದ ಕೋಹಿನೂರ್ ಸಿಟಿಎನ್‍ಎಲ್ ಸಂಸ್ಥೆಯಲ್ಲಿ ಐಎಲ್ ಅಂಡ್ ಎಫ್‍ಎಸ್ ಸಾಲ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟ ಪ್ರಕರಣದಲ್ಲಿ ರಾಜ್ ಠಾಕ್ರೆ ಶಾಮೀಲಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ನಾಯಕನಿಗೆ ಇಡಿ ಸಮನ್ಸ್ ಜಾರಿಗೊಳಿಸಿರುವ ಕ್ರಮವನ್ನು ರಾಜಕೀಯ ಸೇಡಿನ ಕ್ರಮ ಎಂದು ಎನ್‍ಎನ್‍ಎಸ್ ಆರೋಪಿಸಿದೆ.