ಬೆಂಗಳೂರು,ಆ.18- ಟೆಲಿಪೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ರಾಜ್ಯದ ತನಿಖಾ ಸಂಸ್ಥೆಗಳ ಮೂಲಕವೇ ಮಾಡಬಹುದಿತ್ತು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಟೆಲಿಪೋನ್ ಕದ್ದಾಲಿಕೆ ಆರೋಪವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಆದರೆ ರಾಜ್ಯ ತನಿಖಾ ಸಂಸ್ಥೆಗಳ ಮೂಲಕವೇ ತನಿಖೆಯನ್ನು ಮಾಡಬಹುದಿತ್ತು ಎಂದು ಅವರು ಟ್ವೀಟ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕದ್ದಾಲಿಕೆಯಿಂದ ಬಹಿರಂಗಗೊಳ್ಳುವ ಕ್ರಿಮಿನಲ್ ಪ್ರಕರಣಗಳು, ಲಂಚ ಕೊಡು, ಕೊಳ್ಳುವ ವ್ಯವಹಾರಗಳು ನೀತಿಗೆಟ್ಟ ಕ್ರಮಗಳು. ರಾಜ್ಯ ದ್ರೋಹದ ಕೆಲಸಗಳು ಸಮಗ್ರ ತನಿಖೆಗೆ ಒಳಪಡಬೇಕೆಂದು ಒತ್ತಾಯಿಸಿದ್ದಾರೆ.
ಅಂತಹ ಪ್ರಕರಣಗಳಲಿ ಭಾಗಿಯಾದವರು ಕೂಡ ತನಿಖೆ ವ್ಯಾಪ್ತಿಗೆ ಬರಬೇಕು ಎಂದು ಪಾಟೀಲ್ ಆಗ್ರಹಿಸಿದ್ದಾರೆ.