ಹಾಸ್ಟೆಲ್‍ನಲ್ಲಿ ಕಂಬಕ್ಕೆ ವಿದ್ಯುತ್ ತಗುಲಿ ಐವರ ದುರ್ಮರಣ-ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ

ಬೆಂಗಳೂರು, ಆ.18-ಕೊಪ್ಪಳದ ಬಿಸಿಎಂ ಹಾಸ್ಟೆಲ್‍ನಲ್ಲಿ ಕಂಬಕ್ಕೆ ವಿದ್ಯುತ್ ತಗುಲಿ ದುರ್ಮರಣವನ್ನುಅಪ್ಪಿದ ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಲಾ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ.

ಈ ಪ್ರಕರಣದ ಕುರಿತಂತೆ ತನಿಖೆಗೆ ಆದೇಶ ನೀಡಲಾಗಿದೆ. ಇಂತಹ ಘಟನೆ ನಡೆದಿರುವುದು ಅತ್ಯಂತ ವಿಷಾದನೀಯ. ಮೃತಪಟ್ಟ ಐವರು ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಮತ್ರಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೊಪ್ಪಳದ ರಾಘವೇಂದ್ರಮಠದ ಹತ್ತಿರುವ ಬಿಸಿಎಂ ಹಾಸ್ಟೆಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲ್ಲಿಕಾರ್ಜುನ, ಬಸವರಾಜ, ದೇವರಾಜ, ಗಣೇಶ್ ಮತ್ತು ಕುಮಾರ ಎಂಬ ವಿದ್ಯಾರ್ಥಿಗಳು ಕಂಬಕ್ಕೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ಹಾಸ್ಟೆಲ್‍ನ ವಾರ್ಡನ್ ಬಸವರಾಜು ಅವರ ಸೂಚನೆಯಂತೆ ಧ್ವಜದ ಕಂಬದ ಹಗ್ಗವನ್ನು ತರಲು ಹೇಳಿದ್ದರು. ಇದರಿಂದ ಐವರು ವಿದ್ಯಾರ್ಥಿಗಳು ಹಗ್ಗವನ್ನು ತರಲು ಹೋಗಿದ್ದರು. ಈ ವೇಳೆ ಹಗ್ಗ ಬಾರದೆ ಇದ್ದಾಗ ಕಂಬವನ್ನು ಅಲ್ಲಾಡಿಸಿದ ಪರಿಣಾಮ ಮೇಲಿದ್ದ ವೈರ್‍ಗೆ ವಿದ್ಯುತ್ ಕಂಬ ತಗುಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ