ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಬೆಂಗಳೂರು, ಆ.17- ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.19 ರಿಂದ ಮೂರು ದಿನಗಳ ಕಾಲ ಭೇಟಿ ನೀಡಲಿದ್ದಾರೆ.
ಆ.19ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುವ ಸಿದ್ದರಾಮಯ್ಯನವರು ನರಗುಂದ, ರೋಣ ಮಾರ್ಗದ ಮಣ್ಣೇರಿ, ಢಾಣಕ ಶಿರೂರ, ಹಿರೇನಸದಿ, ನವಿಲುಹೊಳೆ, ಮಂಗಳೂರು, ಶಿರಬಡಗಿ, ಗೋನಾಳ, ಕಾಟಾಪುರ, ಮಂಗಳಗುಡ್ಡ, ಚಿಮ್ಮಲಗಿ ಹಾಗೂ ಪಟ್ಟದಕಲ್ಲು ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ನೊಂದ ಸಂತ್ರಸ್ತರ ಅಹವಾಲುಗಳನ್ನು ಆಲಿಸಲಿದ್ದಾರೆ.

ಅಂದು ರಾತ್ರಿ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದು, ಆ.21ರಂದು ನೆರೆ ಹಾವಳಿಗೆ ತುತ್ತಾಗಿರುವ ಕರ್ಲಕೊಪ್ಪ, ಹಾಗನೂರ, ಆಲೂರ ಎಸ್‍ಕೆ, ತಳಕವಾಡ, ಬೀರನೂರ, ಗೋವನಕೊಪ್ಪ, ಕಳಸ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ಮುಮರಡಿಕೊಪ್ಪ, ಚಿಕನೂರ, ನೀಲರಗಿ, ಬೂದಿಹಾಳ, ತಮಿನಾಳ, ಕಾತರಕಿ, ಕ್ಯಾಡ, ಚೋಳಚಗುಡ್ಡ ಪ್ರದೇಶಗಳಿಗೆ ಭೇಟಿ ನೀಡಿ ಇಡೀ ದಿನ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಲಿದ್ದಾರೆ.

ಆಗಸ್ಟ್ 21ರಂದು ನೆಲವಗಿ, ನಂದಿಕೇಶ್ವರ, ಬಿಎನ್ ಜಾಲಿಹಾಳ, ಬಾಚೇನಗುಡ್ಡ, ನಾಗರಹಾಳ ಎಸ್‍ಪಿ, ಸಬ್ಬಲಹುಣಸಿ, ಲಾಯದಗುಂದಿ, ಕೊಟ್ಟಳ್ಳಿ, ಕಟಕಿನಹಳ್ಳಿ, ಆಸಂಗಿ, ಅಲ್ಲೂರ ಎಸ್‍ಪಿ, ಹಳದೂರ, ಇಂದಿನವಾರಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲಿಸಲಿದ್ದಾರೆ ಹಾಗೂ ಸಂತ್ರಸ್ತ ಜನರೊಂದಿಗೆ ಸಮಾಲೋಚನೆ ನಡೆಸಿ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಕಾರ್ಯಕ್ರಮವಿದೆ.
ನೆರೆಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ಪ್ರವಾಸ ಕೈಗೊಂಡು ವಾಸ್ತವ ಪರಿಸ್ಥಿತಿ ಬಗ್ಗೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ